ವಿಧಾನಪರಿಷತ್ ಸದಸ್ಯೆ ವಿಮಲಾಗೌಡ ನಿಧನದಿಂದ ಸ್ಥಾನ ತೆರವಾಗಿದ್ದು, ಆಗಸ್ಟ್​ 31ರಂದು ಉಪಚುನಾವಣೆ ನಡೆಯಲಿದೆ. 

ಬೆಂಗಳೂರು(ಆ.18): ವಿಧಾನಸಭೆಯಿಂದ ವಿಧಾನಪರಿಷತ್​ಗೆ ನೇಮಕ ವಿಚಾರ ಸಂಬಂಧವಾಗಿ ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ. ಸೋಮವಾರ ಇಬ್ರಾಹಿಂ ನಾಮಪತ್ರ ಸಲ್ಲಿಸಲಿದ್ದಾರೆ. ವಿಧಾನಪರಿಷತ್ ಸದಸ್ಯೆ ವಿಮಲಾಗೌಡ ನಿಧನದಿಂದ ಸ್ಥಾನ ತೆರವಾಗಿದ್ದು, ಆಗಸ್ಟ್​ 31ರಂದು ಉಪಚುನಾವಣೆ ನಡೆಯಲಿದೆ.