ಬೆಂಗಳೂರು [ಜು.12] : ನಾವು ಯಾವುದೇ ಕಾರಣಕ್ಕೂ ಕೂಡ ಜೆಡಿಎಸ್ ಜೊತೆಗೆ ಹೋಗುವುದಿಲ್ಲ ಎಂದು ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. 

ಬಿಜೆಪಿ ನಾಯಕ ಈಶ್ವರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ಮುರುಳಿಧರ ರಾವ್ ಅವರನ್ನು ಜೆಡಿಎಸ್ ಸಚಿವ ಸಾ ರಾ ಮಹೇಶ್ ಭೇಟಿ ಮಾಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ ರೇಣುಕಾಚಾರ್ಯ ಇದೊಂದು ಆಕಸ್ಮಿಕ ಭೇಟಿ ಎಂದಿದ್ದಾರೆ. 

ಅಪ್ಪ ಮಕ್ಕಳ ಆಟ 20 -20 ಸರ್ಕಾರ ಇದ್ದಾಗಲೇ ನೋಡಿದ್ದೇವೆ.  ಕುಮಾರಸ್ವಾಮಿ ಸುಳ್ಳು ಸುದ್ದಿ ಹಬ್ಬಿಸುವುದರಲ್ಲಿ ನಿಸ್ಸೀಮರು. JDS ಶಾಸಕರನ್ನು ಹೆದರಿಸಲು  ಬಿಜೆಪಿ ಜೊತೆ ಹೊಂದಾಣಿಕೆ ಎಂದು ಬಿಂಬಿಸುತ್ತಿದ್ದಾರೆ ಎಂದರು. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವಿಚಾರ ಎಲ್ಲಾ ಕಾರ್ಯಕರ್ತರಿಗೂ ಬೇಸರ ತರಿಸಿದೆ. ಎಲ್ಲರೂ ಭೇಟಿ ಬಗ್ಗೆಯೇ ಕರೆ ಮಾಡಿ ಕೇಳುತ್ತಿದ್ದಾರೆ. ಇದೊಂದು ಆಕಸ್ಮಿಕ ಭೇಟಿ ಎಂದು ಸ್ಪಷ್ಟನೆ ನೀಡಿದ್ದೇನೆ ಎಂದಿದ್ದಾರೆ. 

ರಾಜ್ಯ ರಾಜಕೀಯದಲ್ಲಿ ರಾಜೀನಾಮೆ ಪ್ರಹಸನ ನಡೆಯುತ್ತಿರುವ ಬೆನ್ನಲ್ಲೇ ಈ ಭೇಟಿ ಸಾಕಷ್ಟು ಸದ್ದು ಮಾಡುತ್ತಿದೆ.