ಹಲವು ದೇವಾಲಯಗಳ ದರ್ಶನ ಮಾಡಿ ಮುಗಿಸಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ ಇದೀಗ ದರ್ಗಾಗಳ ಕಡೆ ಮುಖ ಮಾಡಿದ್ದಾರೆ. ತಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೊಂದಿಗೆ ರಾಜಸ್ಥಾನದಲ್ಲಿಯೂ ಟೆಂಪಲ್ ರನ್ ಮಾಡಿದ್ದಾರೆ.

ಅಜ್ಮೀರ್[ಆ.23] ರಾಜಸ್ಥಾನದ ಅಜ್ಮೀರ್​ಗೆ ಭೇಟಿ ನೀಡಿದ ಸಿಎಂ ಎಚ್.ಡಿ.ಕುಮಾರಸ್ವಾಮಿ ಬ್ರಹ್ಮ ದೇವಾಲಯಕ್ಕೆ ಭೇಟಿ ನೀಡಿದ್ದರು. ದರ್ಗಾಕ್ಕೆ ಭೇಟಿ ನೀಡಿ ಚಾದರ್ ನ್ನು ಅರ್ಪಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬ್ರಹ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ವಿಶೇಷ ವಿಮಾನದ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಸಿಎಂ ಕುಮಾರಸ್ವಾಮಿ ಹಾಗೂ ಜೆಡಿಎಸ್​ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಅಜ್ಮೀರ್‌ ಗೆ ಭೇಟಿ ನೀಡಿದ್ದರು.

ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ನಂತರವೂ ತಮಿಳುನಾಡು, ಕೇರಳ, ಆಂಧ್ರದ ತಿರುಪತಿ ಸೇರಿದಂತೆ ಹಲವು ಕಡೆ ತೆರಳಿದ್ದರು. ಇತ್ತೀಚೆಗೆ ಧರ್ಮಸ್ಥಳಕ್ಕೂ ಭೇಟಿ ನೀಡಿದ್ದರು.