ಯೋಗ ದಿನಾಚರಣೆಗೆ ಸಿಎಂ ಕುಮಾರಸ್ವಾಮಿ ಗೈರು ಹಾಜರಾಗಿದ್ದಾರೆ. ಇದೇ ಮೊದಲ ಬಾರಿಗೆ ವಿಶ್ವ ಯೋಗ ದಿನಾಚರಣೆಗೆ ಸಿಎಂ ಗೈರು ಹಾಜರಾಗಿದ್ದಾರೆ.
ಬೆಂಗಳೂರು (ಜೂ. 21): ಯೋಗ ದಿನಾಚರಣೆಗೆ ಸಿಎಂ ಕುಮಾರಸ್ವಾಮಿ ಗೈರು ಹಾಜರಾಗಿದ್ದಾರೆ. ಇದೇ ಮೊದಲ ಬಾರಿಗೆ ವಿಶ್ವ ಯೋಗ ದಿನಾಚರಣೆಗೆ ಸಿಎಂ ಗೈರು ಹಾಜರಾಗಿದ್ದಾರೆ.
ನಾಲ್ಕನೆ ವಿಶ್ವ ಯೋಗ ದಿನಾಚರಣೆ ಇದಾಗಿದೆ. ಈ ಹಿಂದಿನ ಮೂರೂ ವರ್ಷವೂ ಸಿಎಂ, ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪ್ರಧಾನಿ ಮೋದಿ ಅವರ ಫಿಟ್ನೆಸ್ ಛಾಲೆಂಜನ್ನು ಸ್ವೀಕರಿಸಿ ವಿಡಿಯೋ ಫೋಟೋ ಬಿಡುಗಡೆ ಮಾಡಿದ್ದರು ಸಿಎಂ ಎಚ್’ಡಿಕೆ. ಆದರೆ ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಲ್ಲರಿಗೂ ಮಾದರಿ ಆಗಬೇಕಿದ್ದ ಸಿಎಂ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದಾರೆ.
ರಾಮನಗರಕ್ಕೆ ತೆರಳುವ ಮುನ್ನ 7 ಗಂಟೆಗೆ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಅವರ ಇಂದಿನ ಕಾರ್ಯಕ್ರಮದ ಪಟ್ಟಿಯಲ್ಲಿಯೂ ಉಲ್ಲೇಖವಾಗಿತ್ತು. ಆದಾಗ್ಯೂ ಸಿಎಂ ಸರ್ಕಾರದವತಿಯಿಂದ ಆಯೋಜಸಿರುವ ವಿಶ್ವ ಯೋಗದಿನಾಚರಣೆಗೆ ಗೈರು ಹಾಜರಾಗಿದ್ದಾರೆ.
