ಮಂಡ್ಯ : ಮಂಡ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರದಲ್ಲಿ ಮೀಸಲಿಟ್ಟ ಅನುದಾನವನ್ನು ಹಿಂಪಡೆಯುವುದು ಕೇವಲ ಗಾಸಿಪ್, ಇಂತಹ ಗಾಸಿಪ್ ಗಳಿಗೆ ಅವಕಾಶ ಕೊಡಬೇಡಿ ಎಂದು ಸಚಿವ ಪುಟ್ಟರಾಜು ಹೇಳಿದರು. 

ಇದುವರೆಗೆ ಜಿಲ್ಲೆಯ ಅಭಿವೃದ್ಧಿಗಾಗಿ ಕೊಟ್ಟ ಅನುದಾನಕ್ಕಿಂತ ಹೆಚ್ಚು ಅನುದಾನ ಕೊಡುತ್ತಾರೆ. ಕೆಲವರಿಗೆ ಗಾಸಿಪ್ ಹಬ್ಬಿಸುವುದೇ ಕೆಲಸವಾಗಿದೆ. ಈಗಾಗಲೇ ಮುಖ್ಯಮಂತ್ರಿ ತಮ್ಮ ಕಾರ್ಯವೈಖರಿ ವೇಗ ಹೆಚ್ಚಿಸಿಕೊಂಡಿದ್ದಾರೆ. ಇನ್ನು ಮುಂದೆ ಸಿಎಂ ಕಾರ್ಯ ವೈಖರಿ ಬದಲಾಗಲಿದ್ದು, ಸಿಎಂ ಮಂಡ್ಯ ಜಿಲ್ಲೆಯನ್ನು ಯಾವುದೇ ಕಾರಣಕ್ಕೂ ಕೂಡ ಮರೆಯುವುದಿಲ್ಲ ಎಂದು ಪುಟ್ಟರಾಜು ಹೇಳಿದರು. 

ಇದೇ ವೇಳೆ ದೇವೇಗೌಡರ ಕುಟುಂಬ ರಾಜಕೀಯ ನಿವೃತ್ತಿ ಪಡೆಯಲಿ ಎಂದಿದ್ದ ಸಂಸದೆ ಶೋಭಾ ಕರಂದ್ಲಾಜೆಗೆ ಸವಾಲು ಹಾಕಿದ ಪುಟ್ಟರಾಜು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಸವಾಲು ಹಾಕಿದ್ದಾರೆ.  ಶಿಕಾರಿಪುರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದು, ಮೊದಲು ಯಡಿಯೂರಪ್ಪಗೆ ರಾಜೀನಾಮೆ ಕೊಡಸಲಿ ಎಂದರು. 

ಚುನಾವಣೆ ಮುಕ್ತಾಯವಾದ ಬಳಿಕವೂ ಕೂಡ ನಿಖಿಲ್ ಮಂಡ್ಯ ಜನತೆಯ ಜೊತೆಯಲ್ಲಿ ಸಂಪರ್ಕದಲ್ಲಿದ್ದು, ಅಮವಾಸ್ಯೆ ಮುಗಿಸಿ ಬರಲು ಕಾಯುತ್ತಿದ್ದರು. ಇನ್ನು ಮುಂದೆ ಇಲ್ಲಿ ಬಂದು ಜೊತೆಯಲ್ಲಿಯೇ ಇರಲಿದ್ದಾರೆ ಎಂದರು.