ಬೆಂಗಳೂರು[ಜು. 12] ಸಿಎಂ ಕುಮಾರಸ್ವಾಮಿ ತಾವೇ ಮುಂದಾಗಿ ವಿಶ್ವಾಸಮತ ಯಾಚನೆ ಮಾಡುತ್ತೇನೆ ಎಂದು ಹೇಳಿರುವುದರ ಹಿಂದೆ ಪಂಚ ಸೂತ್ರವೊಂದಿದೆ. ಹಾಗಾದರೆ ಈ ಸೂತ್ರ ಸಿದ್ಧ ಮಾಡಿದವರು ಯಾರು? ಅತೃಪ್ತರಿಗೆ ನಡುಕ ಹುಟ್ಟಲು HDK  ಮತ್ತು ತಂಡ ಮಾಡಿಕೊಂಡಿರುವ ಹೊಸ ತಂತ್ರ ಏನು ಇಲ್ಲಿದೆ ಡಿಟೇಲ್ಸ್..

ಎಚ್‌ಡಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಹಿಂದಿನ ಪಂಚ ಸೂತ್ರ

1. ರಾಜ್ಯಪಾಲರ ಮಧ್ಯಪ್ರವೇಶ ತಡೆ: ವಿಶ್ವಾಸಮತ ಯಾಚನೆಗೆ ಮುಂದಾದರೆ ರಾಜ್ಯಪಾಲರು ಮಧ್ಯಪ್ರವೇಶ ಮಾಡಲು ಸಾಧ್ಯವಾಗುವುದಿಲ್ಲ. ಯಾವುದೇ ಕ್ಷಣದಲ್ಲಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುವುದನ್ನು ತಡೆಯುವುದು ಸಿಎಂ ಮೊದಲ ಉದ್ದೇಶ.

2.  ಹೊಸ ಹೊಸ ರಾಜೀನಾಮೆಗೆ ಬ್ರೇಕ್: ಈಗಾಗಲೇ ಶಾಸಕರಿಗೆ ವಿಪ್ ಜಾರಿ ಮಾಡಿರುವುದರಿಂದ ಹೊಸ ರಾಜೀನಾಮೆ ನೀಡಿದರೆ ಅದು ಮತ್ತಷ್ಟು ಕಾನೂನು ವ್ಯಾಪ್ತಿಗೆ ಒಳಪಡುತ್ತದೆ.  

3. ಬಿಜೆಪಿಯ ಸದನದ ಒಳಗೆ ಗಲಾಟೆ ಮಾಡುವುದಕ್ಕೆ ತಡೆ: ಬಿಜೆಪಿಯವರು ಸರಕಾರಕ್ಕೆ ಬಹುಮತ ಇಲ್ಲ ಎಂದು ಪದೇ ಪದೇ ವಾದಿಸುತ್ತ ಧರಣಿ ಮಾಡುವುದಕ್ಕೆ ತಡೆ ಹಾಕಲು ವಿಶ್ವಾಸಮತ ಸೂತ್ರ ಮಾಡಿಕೊಂಡಿದ್ದಾರೆ. ತಾವೇ ವಿಶ್ವಾಸಮತ ಸಾಬೀತು ಮಾಡಿದರೆ ಬಿಜೆಪಿಯವರಿಗೆ ಮಾತನಾಡಲು ಅವಕಾಶವೇ ಇಲ್ಲದಂತಾಗುತ್ತದೆ.

‘ಅಪ್ಪ-ಮಕ್ಕಳ ಆಟ ನೋಡಿದ್ದೇವೆ; ಸತ್ತರೂ ಜೆಡಿಎಸ್ ಜೊತೆ ಹೋಗಲ್ಲ’

4. 14 ದಿನದ ಅವಧಿಯಲ್ಲಿ ಮಾಡಿದರೆ ಸಾಕು: ವಿಶ್ವಾಸ ಮತ ಯಾಚನೆಗೆ 14 ದಿನದ ಕಾಲಾವಕಾಶ ಇರುತ್ತದೆ. ನಾಳೆ ಮಾಡುತ್ತೇನೆ ಎಂದು ತೀರ್ಮಾನ ಮಾಡಿದರೆ ಇಂದು ತಿಳಿಸಿದರೆ ಸಾಕು ಎಂಬ ಸ್ಥಿತಿಯಲ್ಲಿರುವ ಸಿಎಂಗೆ ಒಂದಿಷ್ಟು ಆಸೆಗಳು ಚಿಗುರಿದೆ.  ರೋಶನ್ ಬೇಗ್ ಸ್ವಲ್ಪ ಸಾಫ್ಟ್ ಆಗಿದ್ದು ರಾಮಲಿಂಗಾ ರೆಡ್ಡಿ ಅವರ ಮನವೊಲಿಕೆ ಕೂಡ  ನಡೆಯುತ್ತಿದೆ.

5. ಕಾಲಾವಕಾಶ ಲಾಭ: ಯಥಾಸ್ಥಿತಿ ಕಾಯ್ದುಕೊಳ್ಳಲು ಸುಪ್ರಿಂ ಕೋರ್ಟ್ ಹೇಳಿರುವುದರಿಂದ ಮುಂಬೈನಲ್ಲಿರು ಕೆಲ ಅತೃಪ್ತರ ಮನವೊಲಿಕೆ ಜತೆಗೆ ರಿವರ್ಸ್ ಆಪರೇಶನ್ ಮಾಡಿ ಬಿಜೆಪಿ ಬಲ ಕುಗ್ಗಿಸುವ ತಂತ್ರವನ್ನು ಇಟ್ಟುಕೊಳ್ಳಲಾಗಿದೆ.