ಕಳೆದೊಂದು ವಾರದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನ ಉರುಳಿಸಲು ಎಲ್ಲಾ ಯತ್ನಗಳು ನಡೆದಿವೆ. ಒಂದು ಕಡೆ ಜಾರಕಿಹೊಳಿ ಬ್ರದರ್ಸ್ ರಾಜ್ಯ ಸರ್ಕಾರವನ್ನ ಬುಡಮೇಲು ಮಾಡಲು ಹೊರಟ್ಟಿದ್ದರೆ, ಮತ್ತೊಂದೆಡೆ ಬಿಜೆಪಿ ಆಪರೇಷನ್ ಕಮಲ ನಡೆಸಲು ಸಜ್ಜಾಗಿದೆ. ಆದರೆ, ಆಪರೇಷನ್ ಕಮಲದ ಬಗ್ಗೆ ಸ್ವತಃ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಫೋಟಕ ಮಾಹಿತಿಯನ್ನ ಬಹಿರಂಗಪಡಿಸಿದ್ದಾರೆ.

ಬೆಂಗಳೂರು,(ಸೆ.14): ಕಳೆದೊಂದು ವಾರದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನ ಉರುಳಿಸಲು ಎಲ್ಲಾ ಯತ್ನಗಳು ನಡೆದಿವೆ. ಒಂದು ಕಡೆ ಜಾರಕಿಹೊಳಿ ಬ್ರದರ್ಸ್ ರಾಜ್ಯ ಸರ್ಕಾರವನ್ನ ಬುಡಮೇಲು ಮಾಡಲು ಹೊರಟ್ಟಿದ್ದರೆ, ಮತ್ತೊಂದೆಡೆ ಬಿಜೆಪಿ ಆಪರೇಷನ್ ಕಮಲ ನಡೆಸಲು ಸಜ್ಜಾಗಿದೆ. 

"

ಇದನ್ನು ಓದಿ:ಬಿಎಸ್‌ವೈಗೆ ಮತೊಮ್ಮೆ ಹಿನ್ನಡೆ? ಆಪರೇಷನ್ ಕಮಲ ಬೇಡವೆಂದ ಸಂಘ!

ಆದರೆ, ಆಪರೇಷನ್ ಕಮಲದ ಬಗ್ಗೆ ಸ್ವತಃ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪೋಟಕ ಮಾಹಿತಿಯನ್ನ ಬಹಿರಂಗಪಡಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸಮ್ಮಿಶ್ರ ಸರ್ಕಾರವನ್ನ ಉರುಳಿಸಿಲು ಲಾಟರಿ, ಇಸ್ಪೀಟ್ ಹಾಗೂ 2009ರಲ್ಲಿ ಬಿಬಿಎಂಪಿ ಕಚೇರಿಗೆ ಬೆಂಕಿ ಹಚ್ಚಿದ ಕಿಂಗ್ ಪಿನ್‌ಗಳ ಮೂಲಕ ಹಣ ಸಂಗ್ರಹಿಸುತ್ತಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು."

"

ಇದನ್ನು ಓದಿ: ಮೈತ್ರಿ ಕಷ್ಟ ಆದ್ರೆ ಹೇಳ್ಬಿಡಿ, ಬಿಜೆಪಿ ಕಾಯ್ತಾ ಇದೆ: ದೇವೇಗೌಡ ಬಾಂಬ್!

ಜನ್ಮ ಕೊಟ್ಟ ಮಗುವಿಗೆ ಗುಂಡಿಟ್ಟು ಕೊಂದವರು ಈಗ ಜೈಲಿನಲ್ಲಿ ಇದ್ದಾರೆ, ಅದಕ್ಕೆ ಕಾರಣರಾದವರು ಯಾರು ಎಂದು ಗೊತ್ತು. ಆ ವ್ಯಕ್ತಿಯೇ ಈಗ ಸರ್ಕಾರ ಬೀಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ನನಗೆ ಎಲ್ಲವೂ ಗೊತ್ತಿದೆ.ನಾನೇನು ಸುಮ್ಮನೇ ಕುಳಿತಿಲ್ಲ. ಕಾನೂನು ಕ್ರಮ ತೆಗೆದುಕೊಳ್ಳುವ ಸಿದ್ಧತೆ ಮಾಡಿದ್ದೇನೆ.ಎಂದರು.