ಬೆಂಗಳೂರು[ಜು.08]: ಸರ್ಕಾರ ಪತನದ ಅಂಚಿನಲ್ಲಿದ್ದರೂ ಸಿಎಂ ಕುಮಾರಸ್ವಾಮಿ ತಮ್ಮ ಜವಾಬ್ದಾರಿಯನ್ನು ಮರೆತಿಲ್ಲ. ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಕುಮಾರಸ್ವಾಮಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸಂಬಂಧಿಸಿದಂತೆ ಕಬ್ಬು ಬೆಳೆಗಾರರೊಂದಿಗೆ ಸಭೆ ನಡೆಸಿದ್ದಾರೆ.

ಹೌದು ರಾಜ್ಯ ಸರ್ಕಾರ ಅರ್ಅಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಅತೃಪ್ತ ಶಾಸಕರು ಮುಂಬೈ ಹೊಟೇಲ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ ಇತ್ತ ಸಿಎಂ ಆಗಿ ಏನ್ ಮಾಡ್ಬೇಕೋ ಅದನ್ನು ಮಾಡ್ತೀನಿ ಎಂದಿರುವ ಕುಮಾರಸ್ವಾಮಿ ವಿಧಾನಸೌಧದ 3ನೇ ಮಹಡಿಯ ಸಮಿತಿ ಕೊಠಡಿಯಲ್ಲಿ ಸಕ್ಕರೆ ಕೈಗಾರಿಕೆಗಳ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಚಿವ ಡಿಸಿ ತಮ್ಮಣ್ಣ, ಸಚಿವ ಪುಟ್ಟರಾಜು ಕೂಡಾ ಭಾಗಿಯಾಗಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಭೆ ಮುಗಿಸಿ ಪ್ರತಿಕ್ರಿಯಿಸಿರುವ ಸಿಎಂ ಕುಮಾರಸ್ವಾಮಿ 'ಬಿಜೆಪಿ ಏನು ಮಾಡುತ್ತೆ, ಬೇರೆಯವರು ಏನ್ ಮಾಡ್ತಾರೆ ಎಂಬ ಗಮನ ಇಲ್ಲ. ರಾಜಕೀಯ ಬೆಳವಣಿಗೆ ಬಗ್ಗೆ ನಾನು ಗಮನ ಕೊಟ್ಟಿಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆಯಷ್ಟೇ ನನ್ನ ಗಮನದಲ್ಲಿದೆ. ಸರ್ಕಾರಕ್ಕೆ ಏನೂ ಆಗಲ್ಲ, ನನಗೇನು ಆತಂಕ ಇಲ್ಲ. ಕಬ್ಬು ಬೆಳೆಗಾರರ ಜತೆ ಚರ್ಚಿಸಿದ್ದೇನೆ. ಸಕ್ಕರೆ ಕಾರ್ಖಾನೆ ಆರಂಭಕ್ಕೆ 69 ಕೋಟಿ ಬಿಡುಗಡೆಗೆ ಒತ್ತಾಯಿಸಿದ್ದಾರೆ. 
69 ಕೋಟಿ ಬಿಡುಗಡೆ ಮಾಡುವುದು ತುಂಬಾ ಕಷ್ಟ' ಎಂದಿದ್ದಾರೆ.