ಮೈತ್ರಿ ಸರ್ಕಾರ ಪತನವಾಗುವುದು ದೋಸ್ತಿ ಪಡೆಗೆ ಖಚಿತವಾದಂತಿದೆ. ಹಲವು ನಾಯಕರೊಂದಿಗೆ ಚರ್ಚೆ ನಡೆಸಿದ ಸಿಎಂ ಯತ್ನ ಸಫಲವಾಗದ ಲಕ್ಷಣ ಕಂಡು ಬಾರದ ಹಿನ್ನೆಲೆ ತಡವಾಗಿ ಕಲಾಪಕ್ಕೆ ಹಾಜರಾಗಿದ್ದಾರೆ. ಅಲ್ಲದೇ ವಿದಾಯ ಭಾಷಣಕ್ಕೂ ಸಿದ್ಧರಾದಂತಿದೆ.

ಬೆಂಗಳೂರು [ಜು.23] : ಇಂದು ರಾಜ್ಯ ರಾಜಕೀಯ ನಾಟಕಕ್ಕೆ ತೆರೆ ಬೀಳುವ ಲಕ್ಷಣ ಕಾಣುತ್ತಿದೆ. ವಿಶ್ವಾಸಮತ ಯಾಚನೆ ಡೆಡ್ ಲೈನ್ ಗೆ ಕೌಂಟ್ ಡೌನ್ ಶುರುವಾಗಿದ್ದು, ಆತಂಕದಲ್ಲಿರುವ ಸಿಎಂ ತಡವಾಗಿ ಕಲಾಪಕ್ಕೆ ಆಗಮಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನು ಸರ್ಕಾರ ಉಳಿಸಿಕೊಳ್ಳಲು ಶತಪ್ರಯತ್ನ ಮಾಡಿದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಪ್ರಯತ್ನ ಫಲಿಸಿದ ಲಕ್ಷಣ ಮಾತ್ರ ಕಾಣುತ್ತಿಲ್ಲ. ಕಲಾಪಕ್ಕೆ ತಡವಾಗಿ ಆಗಮಿಸಿದ ಸಿಎಂ ವಿದಾಯದಭಾಷಣಕ್ಕೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

ಬೆಳಗ್ಗಿನಿಂದ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿಯೇ ಇದ್ದ ಸಿಎಂ, ಹಲವು ನಾಯಕರೊಂದಿಗೆ ಚರ್ಚೆ ನಡೆಸಿದರೂ ಯಾವ ಫಲ ಸಿಗಲಿಲ್ಲ.

ಅಲ್ಲದೇ ದೋಸ್ತಿ ಸರ್ಕಾರ ಉಳಿಸಿಕೊಳ್ಳುವ ಯತ್ನ ವಿಫಲವಾದ ಹಿನ್ನೆಲೆ ಆತಂಕದಲ್ಲಿಯೇ ಇದ್ದು, ಮಧ್ಯಾಹ್ನದ ನಂತರ ವಿಧಾನಸೌಧಕ್ಕೆ ಆಗಮಿಸಿ ಕಲಾಪಕ್ಕೆ ಹಾಜರಾಗುವ ಮುನ್ನ ಕಡತಕ್ಕೆ ಸಹಿ ಮಾಡಿದ್ದಾರೆ.

ಕಳೆದ 18 ದಿನಗಳಿಂದ ನಡೆಯುತ್ತಿರುವ ಹೈಡ್ರಾಮಾದಲ್ಲಿ ದೋಸ್ತಿಗೆ ಗೆಲುವು ಮರೀಚಿಕೆಯಾಗಿದ್ದು, ಇದರಿಂದ ಸಿಎಂ ರಾಜೀನಾಮೆಯೂ ಅನಿವಾರ್ಯವಾಗಿದೆ.