ಬಾಗಲಕೋಟೆ[ಏ. 17]  ರೈತರು ಸಾಲಮನ್ನಾ ಮಾಡಿ ಎಂದು  ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಅರೆಬೆತ್ತಲೆ ಪ್ರತಿಭಟನೆ ಮಾಡಿದ್ದಾರೆ. ರೈತರು ಮಲಮೂತ್ರ ವಿಸರ್ಜನೆ ಮಾಡಿ ಅದನ್ನೇ ತಿಂತಿದ್ದಾರೆ. ಅಂತಹ ರೈತರನ್ನು ಕರೆದು ಮಾತನಾಡದ ಕಠಿಣ ಹೃದಯದ ಪ್ರಧಾನಿ ಇವರು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಸಿಎಂ ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.

ವರದಿ ಬರೀ ಓಳು: ಉಗ್ರ ಕ್ಯಾಂಪ್ ಮುಚ್ಚಿ ಬಳಿಕ ನಮ್ಮದಲ್ಲ ಎಂದ ಪಾಕ್!

ನಾವು ಕಣ್ಣಲ್ಲಿ ನೀರು ಹಾಕಿದ್ದು ಪಾಕಿಸ್ತಾನದಲ್ಲಿ ಆಗಿರೋ ನೋವಿಗಲ್ಲ. ಪಾಕಿಸ್ತಾನದಲ್ಲಿ ಏನು ಆಗಿಲ್ಲ. ಪಾಕಿಸ್ತಾನದ ಗಡಿಯಲ್ಲಿ ಜನರಿಲ್ಲದ ಯಾವುದೋ ಒಂದು ಕಾಡಿನಲ್ಲಿ ಬಾಂಬ್ ಹಾಕಿದ್ದಾರೆ.  ನಾನು ಕಾಣದಿರೋದಲ್ಲ ಎಂದು ಸಿಎಂ ವಿವಾದಿತ ಹೇಳಿಕೆ ನೀಡಿದರು.

ನಾನು ಕಣ್ಣೀರಿಟ್ಟಿದ್ದು, ಪುಲ್ವಾಮಾ ದಾಳಿಯಲ್ಲಿ ಬಡ ಕುಟುಂಬದ ಮೈಸೂರು ಭಾಗದ ಯೋಧ ಹತ್ಯೆಯಾದರು. 19ವರ್ಷದ ಹೆಣ್ಣು ಮಗಳು ವಿಧವೆಯಾಗಿದ್ದಕ್ಕೆ ಕಣ್ಣೀರು ಹಾಕಿದ್ದೇನೆ ಎಂದರು.