ಶ್ರೀಲಂಕಾ ದಾಳಿ,  7 ಪಾರ್ಥಿವ ಶರೀರದ ಗುರುತು ಪತ್ತೆ: HDK

ಶ್ರೀಲಂಕಾದ ಉಗ್ರರ ಅಟ್ಟಹಾಸನಕ್ಕೆ ಮೂನ್ನುರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಕರ್ನಾಟಕದ ಹಲವರು ಮೃತಪಟ್ಟಿದ್ದು ನಾಯಕರ ಆದಿಯಾಗಿ ಸಾಂತ್ವಾನ ಮಿಡಿದಿದ್ದಾರೆ.

CM HD Kumaraswamy condolences sri-lanka bomb explosion victims family

 ಉಡುಪಿ(ಏ. 23)  ಶ್ರೀಲಂಕಾ ಸರಣಿ ಬಾಂಬ್ ಬ್ಲ್ಯಾಸ್ಟ್ ಪ್ರಕರಣ ಅತ್ಯಂತ ಮೃಗೀಯ ಘಟನೆ.  300 ಕ್ಕೂ ಹೆಚ್ಚು ಜನರ ಸಾವು ಇಡೀ ಪ್ರಪಂಚಕ್ಕೆ ನೋವು ತಂದಿದೆ.

ಭಾರತದ, ರಾಜ್ಯದ ಹಲವರ ಸಾವಾಗಿದೆ. ನೊಂದ ಕುಟುಂಬಗಳಿಗೆ ನನ್ನ ಸಂತಾಪವಿದೆ. ನೋವು ಭರಿಸುವ ಶಕ್ತಿ ಭಗವಂತ ನೀಡಲಿ. ನನ್ನ ಪಕ್ಷದ ಐದು ಜನ ನಾಯಕರು ಮೃತಪಟ್ಟಿದ್ದಾರೆ. ಅವರು  ಪಕ್ಷದ ಆಧಾರ ಸ್ತಂಭಗಳಾಗಿದ್ದರು.

ಹರಟೆ ಹೊಡೆಯುತ್ತಿದ್ದಾಗ ಪಕ್ಕದಲ್ಲೇ ಢಂ ಅಂತು : ಕನ್ನಡಿಗರ ನೇರ ಅನುಭವ

 ಅವರ ಸಾವು ಪಕ್ಷಕ್ಕೆ- ಅವರ ಕುಟುಂಬಕ್ಕೆ ಆಘಾತ ತಂದಿದೆ. ಕನಸಿನಲ್ಲೂ ನಾನು ಇಂಥದ್ದು ನಡೆಯುತ್ತದೆ ಎಂದು  ಊಹಿಸಿರಲಿಲ್ಲ ನನ್ನ ಜೊತೆ ಬಹಳ ಆತ್ಮೀಯರಾಗಿದ್ದರು. ಹನುಮಂತರಾಯಪ್ಪ, ರಂಗಣ್ಣ, ಶಿವಣ್ಣ, ಲಕ್ಷ್ಮೀನಾರಾಯಣ, ರಮೇಶ್ ಆತ್ಮೀಯರಾಗಿದ್ದರು ಎಂದು ಹೇಳಿದರು.

 ನಾಯಕರ ಸಾವಿನಿಂದ ನೆಲಮಂಗಲದಲ್ಲಿ  ಶೇ. 50 ಶಕ್ತಿ ಕುಸಿತವಾಗಿದೆ. ಪ್ರಾಮಾಣಿಕ , ಸಾಮಾಜಿಕ ಸೇವೆ ಮಾಡುವವರನ್ನು ಕಳೆದುಕೊಂಡಿದ್ದೇವೆ. ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ಕೊಡಲಾಗಿದ್ದು  ಲಂಕಾ ಸಚಿವಾಲಯ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ ಏಳು ಪಾರ್ಥಿವ ಶರೀರ ಗುರುತು ಹಿಡಿಯಲಾಗಿದೆ ಎಂದು ತಿಳಿಸಿದರು.

ಮಂಜುನಾಥ್ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಆಗಾಗ ಕರೆ ಮಾಡಿ ಮಾತನಾಡುತ್ತಿದ್ದೇನೆ. ಮರಣೋತ್ತರ ಪ್ರಕ್ರಿಯೆ ಶೀಘ್ರ ಮುಗಿಸಲು ಮನವಿ ಮಾಡಲಾಗಿದೆ. ಕೃಷ್ಣಪ್ಪ, ಶ್ರೀನಿವಾಸ ಮೂರ್ತಿಗೆ ಜವಾಬ್ದಾರಿ ನೀಡಲಾಗಿದ್ದು  ಖಾಸಗಿ ಏರ್ ಕಾರ್ ಕಾರ್ಗೋಗೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಗ್ಗೆಯೊಳಗೆ ಮೃತದೇಹ ಕರ್ನಾಟಕಕ್ಕೆ ಬರಬೇಕು ಎಂದು ಕುಮಾರಸ್ವಾಮಿ ತಿಳಿಸಿದರು.
 

Latest Videos
Follow Us:
Download App:
  • android
  • ios