ಮೈಸೂರು (ಅ.10): ವಿಶ್ವ ವಿಖ್ಯಾತ‌ ನಾಡಹಬ್ಬ ದಸರಾ ಮಹೋತ್ಸವ - 2016 ನ್ನು  ಈ ಬಾರಿ ದಸರಾ ಸರಳವಾಗಿ ಆಚರಿಸುತ್ತಿದ್ದೇವೆ. ಆದರೂ ಪ್ರವಾಸಿಗರ ಸಂಖ್ಯೆಯ ಹೆಚ್ಚಳ ಸಂತಸ ತಂದಿದೆ ಎಂದು ದಸರಾ ಕಾರ್ಯಕ್ರಮಕ್ಕೆ ಬಂದಿದ್ದ  ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಇದೇ ಸಂದರ್ಭದಲ್ಲಿ ಮಾತನಾಡುತ್ತಾ ರಾಜ್ಯದಲ್ಲಿ ಭೀಕರ ಬರಗಾಲವಿದೆ. ಇದನ್ನೇ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಆರೋಪ‌ ಮಾಡುತ್ತಿವೆ. ಅವರಿಗೆ ಚರ್ಚಿಸಲು ಬೇರೆ ವಿಷಯವಿಲ್ಲ. 110 ತಾಲೂಕುಗಳನ್ನು ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಲಾಗಿದೆ. ಅವರಿಗೆ ಅಗತ್ಯವಾದ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.