ಚಾಮುಂಡೇಶ್ವರಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯಗೆ ತವರಿನಲ್ಲಿಯೇ ಮತ್ತೆ ಮುಖಭಂಗವಾಗಿದೆ. ಜೆಡಿಎಸ್ ಮುಖಂಡನನ್ನು ಕಾಂಗ್ರೆಸ್’ಗೆ ಸೆಳೆಯುವ ಪ್ರಯತ್ನ ವಿಫಲವಾಗಿದೆ.
ಮೈಸೂರು (ಏ. 01): ಚಾಮುಂಡೇಶ್ವರಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯಗೆ ತವರಿನಲ್ಲಿಯೇ ಮತ್ತೆ ಮುಖಭಂಗವಾಗಿದೆ. ಜೆಡಿಎಸ್ ಮುಖಂಡನನ್ನು ಕಾಂಗ್ರೆಸ್’ಗೆ ಸೆಳೆಯುವ ಪ್ರಯತ್ನ ವಿಫಲವಾಗಿದೆ.
ಬೆಳವಾಡಿಯ ಗ್ರಾ.ಪಂ. ಸದಸ್ಯ ಮೋಹನ್ ಮನೆಗೆ ಭೇಟಿ ನೀಡಿ ಕಾಂಗ್ರೆಸ್’ಗೆ ಬರುವಂತೆ ಸಿಎಂ ಆಹ್ವಾನ ನೀಡಿದ್ದಾರೆ. ಸಿಎಂ ಆಹ್ವಾನವನ್ನು ಮೋಹನ್ ತಿರಸ್ಕರಿಸಿದ್ದಾರೆ. ನಾನು ಮತ್ತು ನನ್ನ ತಂದೆ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೆವು. ಸಿದ್ದರಾಮಯ್ಯನವರ ಉದಾಸೀನದಿಂದಾಗಿಯೇ ನಾವು ಜೆಡಿಎಸ್ ಪಕ್ಷ ಸೇರಿದ್ದೇವೆ. ಯಾವ ಕಾರಣಕ್ಕೂ ಕಾಂಗ್ರೆಸ್’ಗೆ ಮರಳುವುದಿಲ್ಲ. ಚಾಮುಂಡೇಶ್ವರಿಯಲ್ಲಿ ಶಾಸಕ ಜಿ.ಟಿ. ದೇವೇಗೌಡ ರ ಪರ ಕೆಲಸ ಮಾಡುತ್ತೇವೆ. ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಮಡುವುದೇ ನನ್ನ ಗುರಿ ಎಂದು ಗ್ರಾ.ಪಂ.ಸದಸ್ಯ ಮೋಹನ್ ಪ್ರತಿಕ್ರಿಯೆ ನೀಡಿದ್ದಾರೆ.
