ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಾದಾಮಿ ಮೇಲೆ ಕಣ್ಣು..!

news | Tuesday, January 16th, 2018
Prashanth Nathu
Highlights

ಅದೇಕೋ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ಮೇಲೆ ಕಣ್ಣು ಬಿದ್ದಿದೆ. ಅಲ್ಲಿ ಶಾಸಕರಾಗಿರುವ ಬಿ.ಬಿ ಚಿಮ್ಮನಕಟ್ಟಿ ಅನಾರೋಗ್ಯ ಪೀಡಿತರಾಗಿರುವುದರಿಂದ ಅಲ್ಲಿನ ಜನ ಸಿದ್ದರಾಮಯ್ಯನವರಿಗೆ ನೀವು ಬಂದು ನಿಲ್ಲಿ ಎಂದು ಗಂಟು ಬಿದ್ದಿದ್ದಾರೆ.

ಬೆಂಗಳೂರು (ಜ.16): ಅದೇಕೋ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ಮೇಲೆ ಕಣ್ಣು ಬಿದ್ದಿದೆ. ಅಲ್ಲಿ ಶಾಸಕರಾಗಿರುವ ಬಿ.ಬಿ ಚಿಮ್ಮನಕಟ್ಟಿ ಅನಾರೋಗ್ಯ ಪೀಡಿತರಾಗಿರುವುದರಿಂದ ಅಲ್ಲಿನ ಜನ ಸಿದ್ದರಾಮಯ್ಯನವರಿಗೆ ನೀವು ಬಂದು ನಿಲ್ಲಿ ಎಂದು ಗಂಟು ಬಿದ್ದಿದ್ದಾರೆ.

ಬಾದಾಮಿ ಕುರುಬರು ಹೆಚ್ಚಾಗಿ ಪ್ರಾಬಲ್ಯ ಹೊಂದಿರುವ ಕ್ಷೇತ್ರ. ಹೀಗಾಗಿ ಸಿದ್ದರಾಮಯ್ಯ ಇಲ್ಲಿ ಬಂದು ನಿಂತರೆ ಅಕ್ಕಪಕ್ಕದ ಜಿಲ್ಲೆಗಳಲ್ಲೂ ಪರಿಣಾಮ ಆಗುತ್ತದೆ ಎಂದು ಸಿದ್ದರಾಮಯ್ಯ ಯೋಚಿಸುತ್ತಿದ್ದಾರೆ. 

ದೆಹಲಿಯಲ್ಲಿ ಪತ್ರಕರ್ತರು ಬಾದಾಮಿ ಬಗ್ಗೆ ಕೇಳಿದಾಗ ‘ಹೌದು ಅಲ್ಲಿಯವರು ಬಹಳ ಹೇಳುತ್ತಿದ್ದಾರೆ. ಆದರೆ ನಾನು ತೀರ್ಮಾನ ತೆಗೆದುಕೊಂಡಿಲ್ಲ, ನೋಡೋಣ’ ಎಂದು ಹೇಳಿದ್ದಾರೆ. ಕಳೆದ ಒಂದು ವರ್ಷದಿಂದ ಚಾಮುಂಡೇಶ್ವರಿ ಪಕ್ಕಾ ಎನ್ನುತ್ತಿದ್ದ ಸಿದ್ದರಾಮಯ್ಯ ಈ ಬಾರಿ ಬಾದಾಮಿ ಬಗ್ಗೆ ಮಾತನಾಡಿದ್ದು ನೋಡಿದರೆ ಚಾಮುಂಡೇಶ್ವರಿ ವರ ಕೊಡುತ್ತಾಳೋ ಇಲ್ಲವೋ ಎಂಬ ಸಣ್ಣ ಸಂದೇಹ ಮುಖ್ಯಮಂತ್ರಿಗಳಿಗೆ ಇರುವಂತೆ ಕಾಣುತ್ತಿದೆ.

Comments 0
Add Comment

    ಮೈತ್ರಿ ಸರ್ಕಾರ ಹೆಚ್ಚು ದಿನ ಉಳಿಯೋದಿಲ್ಲ: ಜಗ್ಗೇಶ್ ಭವಿಷ್ಯ

    news | Tuesday, May 22nd, 2018