ಆಂಧ್ರ ಪ್ರದೇಶದ ಕುರ್ನೂಲ್‌ ಜಿಲ್ಲೆಯ ನಂದ್ಯಾಲ ವಿಧಾನಸಭಾ ಕ್ಷೇತ್ರದ ಕೆಲವು ಗ್ರಾಮಗಳಲ್ಲಿ ಟಿಡಿಪಿ ಪ್ರಭಾವ ಇಲ್ಲದಿರುವುದಕ್ಕೆ ತಮ್ಮ ಪಕ್ಷದ ನಾಯಕರ ವಿರುದ್ಧ ಸಿಎಂ ಚಂದ್ರ ಬಾಬು ನಾಯ್ಡು ಗರಂ ಆಗಿದ್ದಾರೆ.

ಹೈದರಾಬಾದ್‌: ಆಂಧ್ರ ಪ್ರದೇಶದ ಕುರ್ನೂಲ್‌ ಜಿಲ್ಲೆಯ ನಂದ್ಯಾಲ ವಿಧಾನಸಭಾ ಕ್ಷೇತ್ರದ ಕೆಲವು ಗ್ರಾಮಗಳಲ್ಲಿ ಟಿಡಿಪಿ ಪ್ರಭಾವ ಇಲ್ಲದಿರುವುದಕ್ಕೆ ತಮ್ಮ ಪಕ್ಷದ ನಾಯಕರ ವಿರುದ್ಧ ಸಿಎಂ ಚಂದ್ರ ಬಾಬು ನಾಯ್ಡು ಗರಂ ಆಗಿದ್ದಾರೆ.

ಪಕ್ಷಕ್ಕೆ ಮತ ನೀಡದ ಗ್ರಾಮಗಳನ್ನು ನಿರ್ಲಕ್ಷಿಸಲೂ ಮುಜುಗರ ವಿಲ್ಲ ಎಂದು ಪಕ್ಷದ ನಾಯಕರಲ್ಲಿ ನಾಯ್ಡು ಹೇಳಿದ್ದಾರೆ. ನಂದ್ಯಾಲ ಶಾಸಕ ಭೂಮ ನಾಗಿರೆಡ್ಡಿ ನಿಧನದ ಹಿನ್ನೆಲೆ, ಈ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಯಲಿದ್ದು, ಟಿಡಿಪಿ ಅದರಲ್ಲಿ ಗೆಲ್ಲುವುದಕ್ಕೆ ಯತ್ನಿಸುತ್ತಿದೆ. ತಮ್ಮನ್ನು ಬೆಂಬಲಿಸುತ್ತಿಲ್ಲವೆಂದಾ ದಲ್ಲಿ, ಸರ್ಕಾರದ ಸೌಲಭ್ಯಗಳನ್ನೂ ಪಡೆಯ ದಂತೆ ತಿಳಿಸಲು ಕಾಯಕರ್ತರಿಗೆ ಹೇಳಿದ್ದಾರೆ.