ಬೆಂಗಳೂರು [ಜು.27] :  ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಬಿ.ಎಸ್.ಯಡಿಯೂರಪ್ಪ ಅವರು ಆಪ್ತ ಸಹಾಯಕ ಸಂತೋಷ್ ವಿರುದ್ಧ ಗರಂ ಆದ ಪ್ರಸಂಗ ನಡೆಯಿತು.

ಪ್ರಮಾಣ ವಚನ ಕಾರ್ಯಕ್ರಮದ ಬಳಿಕ ಯಡಿಯೂರಪ್ಪ ಅವರು ರಾಜಭವನದಿಂದ ವಿಧಾನಸೌಧದತ್ತ ತೆರಳಲು ಮುಂದಾದರು. ಈ ವೇಳೆ ತಮ್ಮ ವಾಹನ ಎಲ್ಲಿ? ಎಂದು ಕೇಳಿದ ಬಳಿಕ ಯಾಕೆ ಅಷ್ಟು ದೂರ ಕಾರನ್ನು ನಿಲ್ಲಿಸಲಾಗಿದೆ ಎಂದು ಕೋಪದಿಂದಲೇ ಆಪ್ತ ಸಹಾಯಕ ಸಂತೋಷ್‌ರನ್ನು ಪ್ರಶ್ನಿಸಿದರು. 

ಯಡಿಯೂರಪ್ಪ ಕೋಪವನ್ನು ಕಂಡ ಸಂತೋಷ್, ಕಾರು ಚಾಲಕ ತಿಂಡಿ ತಿನ್ನಲು ಹೋಗಿದ್ದಾನೆ ಎಂದರು. ಇದರಿಂದ ಮತ್ತಷ್ಟು ಕೋಪಗೊಂಡ ಯಡಿಯೂರಪ್ಪ ಅವರು ತಿಂಡಿ ತಿನ್ನೋಕೆ ಹೋಗು ಎಂದು ಹೇಳಿಬಿಡು ಎಂದು ಸಿಟ್ಟು ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಮತ್ತೊಂದು ಕಾರನ್ನು ಹತ್ತಿ ವಿಧಾನಸೌಧದತ್ತ ಪ್ರಯಾಣಿಸಿದರು.