'ಶಾ'ರ ಯಾವ ಮಂತ್ರದಂಡವೂ ನಡೆಯುವುದಿಲ್ಲ. ಮತ್ತೆ ಅಧಿಕಾರಕ್ಕೆ ಬರುವುದು ನಾವೇ'.
ಬೆಂಗಳೂರು(ನ.11): ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಿನ್ನೆ ನೀಡಿದ್ದ ಸಿದ್ದರಾಮಯ್ಯ ನಯವಂಚಕ ಹೇಳಿಕೆಗೆ ಸಿಎಂ ತಿರುಗೇಟು ನಿಡಿದ್ದಾರೆ.
ನಗರದ ವಿಜಯನಗರದಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿ, ಬಿಜೆಪಿಯವರೆ ನಯವಂಚಕರು. ಬೆಣ್ಣೆನಲ್ಲಿ ಕೂದಲು ತೆಗೆತಾರಲ್ಲ ಆ ರೀತಿ ಮಾತನಾಡುತ್ತಾರೆ. ಅವರಂತಹ ಭ್ರಷ್ಟರು, ಕೊಳಕು ರಾಜಕಾರಣಿಗಳು ಎಲ್ಲೂ ಸಿಗಲಿಕ್ಕೆ ಸಾಧ್ಯವಿಲ್ಲ. ಎಲ್ಲರೂ ಲೂಟಿ ಹೊಡೆಯುವ ಕೆಲಸ ಮಾಡುತ್ತಾರೆ. ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಏನೇನೋ ಮಾತನಾಡ್ತಾರೆ. ಅವರು ಏನು ಮಾತಾನಾಡ್ತಾರೆ ಅವರಿಗೆ ಗೊತ್ತಾಗುವುದಿಲ್ಲ'.
ನನ್ನ ಯಾವುದಾದರೂ ಒಂದು ಹಗರಣ ಸಾಬೀತು ಮಾಡಿದರೆ ರಾಜಕೀಯದಿಂದಲೇ ನಿವೃತ್ತಿಯಾಗಿಬಿಡುತ್ತೇನೆ. ಈ ಮಾತನ್ನು ಹೇಳುವುದು ಮತ್ಯಾರು ಅಲ್ಲ ಜೈಲಿಗೆ ಹೋಗಿ ಬಂದ ಯಡಿಯೂರಪ್ಪ. ಕರ್ನಾಟಕದಲ್ಲಿ 'ಶಾ'ರ ಯಾವ ಮಂತ್ರದಂಡವೂ ನಡೆಯುವುದಿಲ್ಲ. ಮತ್ತೆ ಅಧಿಕಾರಕ್ಕೆ ಬರುವುದು ನಾವೇ'.
ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ಜನಾರ್ದನ್ ರೆಡ್ಡಿ, ಹಾಲಪ್ಪ ,ಆನಂದ್ ಸಿಂಗ್ ಇವರೆಲ್ಲ ಜೈಲಿಗೆ ಹೋಗಿ ಬಂದವರು. ಕೆಲವು ಮಂತ್ರಿಗಳು ಬ್ಲೂ ಫಿಲ್ಮ್ ನೋಡಿ ಮಂತ್ರಿ ಸ್ಥಾನ ಕಳೆದುಕೊಂಡರು. ಬ್ಲೂ ಫಿಲ್ಮಂ ಅಂದ್ರೆ ಗೊತ್ತಾ ನೀಲಿ ಚಿತ್ರ ' ಎಂದು ಬಿಜೆಪಿ ನಾಯಕರನ್ನು ವಾಮಗೋಚರವಾಗಿ ನಿಂದಿಸಿದರು.
