ಅಮಿತ್ ಶಾ ಅವರಿಗೆ ಸೋಲಿನ ಭಯ ಆರಂಭವಾಗಿದೆ. ಉಪ ಚುನಾವಣೆ ಫಲಿತಾಂಶ ಬಂದಾಗಿನಿಂದ ಭಯಪಡುತ್ತಿದ್ದಾರೆ. ಅಮಿತ್ ಶಾ  ಯಾವ ತಂತ್ರವೂ ಕೂಡ ಕರ್ನಾಟಕದಲ್ಲಿ ನಡೆಯುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಉಡುಪಿ (ಜ.09): ಅಮಿತ್ ಶಾ ಅವರಿಗೆ ಸೋಲಿನ ಭಯ ಆರಂಭವಾಗಿದೆ. ಉಪ ಚುನಾವಣೆ ಫಲಿತಾಂಶ ಬಂದಾಗಿನಿಂದ ಭಯಪಡುತ್ತಿದ್ದಾರೆ. ಅಮಿತ್ ಶಾ ಯಾವ ತಂತ್ರವೂ ಕೂಡ ಕರ್ನಾಟಕದಲ್ಲಿ ನಡೆಯುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ನಾಟಕದ ಮತದಾರ ಕಾಂಗ್ರೆಸ್ ಪಕ್ಷ ಗೆಲ್ಲಿಸುತ್ತಾನೆ. ಅಮಿತ್ ಶಾ ಗೌಪ್ಯ ಸಭೆ ಮಾಡಲಿ. ಏನೇ ಮಾಡಿದರೂ ಕೂಡ ಸೂಕ್ತ ಸಮಯದಲ್ಲಿ ನಮ್ಮ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಇನ್ನು ನನ್ನ ಆತ್ಮೀಯರನ್ನು ಹಾಗೂ ಆಪ್ತರನ್ನು ಹುಡುಕಿ ಐಟಿ ದಾಳಿ ಮಾಡಲಾಗುತ್ತಿದೆ. ಶಿವಣ್ಣ ಅವರ ಮನೆಗೂ ಕೂಡ ದುರುದ್ದೇಶದಿಂದ ದಾಳಿ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ಪ್ರವಾಸ ಮಾಡಲು ಯಾರ ದುಡ್ಡನ್ನು ಬಳಕೆ ಮಾಡಿಕೊಳ್ಳುತ್ತಾರೆ. ಅವರೇನು ಸ್ವಂತ ದುಡ್ಡಲ್ಲಿ ಓಡಾಡುತ್ತಾರಾ,,? ಸರ್ಕಾರಿ ಕಾರ್ಯಕ್ರಮಕ್ಕೆ ನಾವು ಓಡಾಡುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಲ್ಲದೇ ದೇವೇಗೌಡರನ್ನು ನಾನು ಬಹಳ ವರ್ಷದಿಂದಲೂ ಕೂಡ ನೋಡಿದ್ದೇನೆ. ಅಲ್ಲದೇ ಅವರ ಜೊತೆಗಿದ್ದೂ ಕೂಡ ನೋಡಿದ್ದೇನೆ ಎಂದು ಉಡುಪಿಯ ಉಪ್ಪೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.