ಬೆಂಗಳೂರು (ಸೆ.15): ನಾಳೆ ತಮಿಳುನಾಡು ಬಂದ್ ನಡೆಯಲಿದ್ದು ಕನ್ನಡಿಗರ ಸುರಕ್ಷತೆಗಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಜಯಲಲಿತಾರಿಗೆ ಮನವಿ ಮಾಡಿಕೊಂಡಿದ್ದಾರೆ.

"12 ರಂದು ಕರ್ನಾಟಕದಲ್ಲಿ ಕಾವೇರಿ ಬಂದ್ ಗೆ ಕರೆಕೊಟ್ಟ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ ಮಾಡಲಾಗಿತ್ತು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿ ಪ್ರತಿಭಟನೆಯ ಕಿಚ್ಚು ಹೆಚ್ಚಾಯಿತು. ನಾವು ಮುಂಜಾಗ್ರತಾ ಕ್ರಮ ಕೈಗೊಂಡರೂ ಗಲಾಟೆಯನ್ನು ಹತ್ತಿಕ್ಕಲು ಸಾಧ್ಯವಾಗಲಿಲ್ಲ.ನಂತರ ಪರಿಸ್ಥಿತಿ ಹದಕ್ಕೆ ಬಂದಿದೆ. ಪ್ರತಿಭಟನಾಕಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಇಂತಹ ಘಟನೆ ಪುನರಾವರ್ತಿತ ಆಗದಂತೆ ಕಾನೂನು ಸವ್ಯವಸ್ಥೆ ಕಾಪಾಡಲು ನಿರ್ದೇಶನ ನೀಡಿದ್ದೇನೆ" ಎಂದು ಜಯಲಲಿತಾಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಕಾವೇರಿ ಬಂದ್ ಸಂದರ್ಭದಲ್ಲಿ ಉಂಟಾದ ಹಾನಿಯ ಬಗ್ಗೆ ಸಿದ್ಧರಾಮಯ್ಯ ಕನಿಕರ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಿಂದ ಯಾರಿಗೂ ಲಾಭವಿಲ್ಲ ಎಂದಿದ್ದಾರೆ.