ನಿಮ್ಮ ಪಕ್ಷದವರೇ ನಿಮ್ಮ ಮಾತು ಕೇಳಲ್ಲ ಅಂದ್ರೂ ನಾವ್  ಕೇಳ್ತೇವೆ. ಸದನದಲ್ಲಿ ನೀವ್ ಇದ್ರೆ ನಮಗೆ ರಕ್ಷಣೆ ಎಂದು ಈಶ್ವರಪ್ಪ ಸಿದ್ದರಾಮಯ್ಯನವರ ಕಾಲೆಳೆದಿರುವ ಮಜವಾದ ಪ್ರಸಂಗ ಬೆಳಗಾವಿ ಅಧಿವೇಶನದಲ್ಲಿ ನಡೆದಿದೆ.  

ಬೆಳಗಾವಿ (ನ.13): ನಿಮ್ಮ ಪಕ್ಷದವರೇ ನಿಮ್ಮ ಮಾತು ಕೇಳಲ್ಲ ಅಂದ್ರೂ ನಾವ್ ಕೇಳ್ತೇವೆ. ಸದನದಲ್ಲಿ ನೀವ್ ಇದ್ರೆ ನಮಗೆ ರಕ್ಷಣೆ ಎಂದು ಈಶ್ವರಪ್ಪ ಸಿದ್ದರಾಮಯ್ಯನವರ ಕಾಲೆಳೆದಿರುವ ಮಜವಾದ ಪ್ರಸಂಗ ಬೆಳಗಾವಿ ಅಧಿವೇಶನದಲ್ಲಿ ನಡೆದಿದೆ.

ನಿಮಗೆ ನಾವ್ ರಕ್ಷಣೆ ಮಾಡ್ತೇವೆ, ಈಶ್ವರಪ್ಪಗೆ ವಿಶೇಷ ರಕ್ಷಣೆ ಕೊಡುತ್ತೇವೆ ಎಂದು ಸಿಎಂ ಚಟಾಕಿ ಹಾರಿಸಿದ್ದಾರೆ. ರಾಜ್ಯದ 6.5 ಕೋಟಿ ಜನಕ್ಕೆ ರಕ್ಷಣೆ ಕೂಡ ನಮ್ಮ ಜವಾಬ್ದಾರಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ವೇಳೆ ಆರೋಪಿ ನಂಬರ್ ಒಂದಕ್ಕೂ ರಕ್ಷಣೆ ಮಾಡುತ್ತಿದ್ದೀರಲ್ಲ ಎಂದು ಸಿದ್ದರಾಮಯ್ಯಗೆ ಈಶ್ವರಪ್ಪ ಟಾಂಗ್ ನೀಡಿದ್ದಾರೆ. ಆರೋಪಗಳನ್ನು ಮಾಡಿ ಈಶ್ವರಪ್ಪ ಕಾಂಗ್ರೆಸ್ ಶಾಸಕರನ್ನು ಪ್ರಚೋದಿಸಬಾರದು ಎಂದು ಸಿಎಂ ಹೇಳಿದರೆ, ಮತ್ತೀನೇನು ? ಮುದ್ದು ಮಾಡಿ ಮುತ್ತು ಕೊಡಲಾ ? ಕೆ ಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ.