ಪ್ರತಿ ವಾರ ಈ ಕಾರ್ಯಕ್ರಮ ಕೃಷ್ಣ ಸ್ಟುಡಿಯೋದಿಂದ ನೇರ ಪ್ರಸಾರವಾಗಲಿದೆ.
ಬೆಂಗಳೂರು(ಸೆ.29): ಪ್ರಧಾನ ಮಂತ್ರಿ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಟಾಂಗ್ ಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ಸಿದ್ದರಾಮಯ್ಯ ಅವರು ವಾರದಲ್ಲಿ ಒಂದು ದಿನ ಕಾಮ್ ಕಿ ಬಾತ್ ನಡೆಸಿಕೊಡಲಿದ್ದಾರೆ. 175 ತಾಲೂಕುಗಳಲ್ಲಿ ಕಾಮ್ ಕಿ ಬಾತ್ ಕಾರ್ಯಕ್ರಮವನ್ನು ವಿಡಿಯೋ ಡಿಜಿಟಲ್ ಸ್ಕ್ರೀನ್ ಮೂಲಕ ಅಳವಡಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ.
17 ಕೋಟಿ ವೆಚ್ಚದಲ್ಲಿ ಡಿಜಿಟಲ್ ಸ್ಕ್ರೀನ್ ನಿರ್ಮಾಣವಾಗಲಿದ್ದು, ಚುನಾವಣೆ ಸಮೀಪಿಸುತ್ತಿದ್ದಂತೆ ಮಾರ್ಕೇಟಿಂಗ್ ಮಾಡಲು ಮುಂದಾಗಿದ್ದಾರೆ. ಪ್ರತಿ ವಾರ ಈ ಕಾರ್ಯಕ್ರಮ ಕೃಷ್ಣ ಸ್ಟುಡಿಯೋದಿಂದ ನೇರ ಪ್ರಸಾರವಾಗಲಿದೆ. ಸರ್ಕಾರದ ಸಾಧನೆ ಗಳನ್ನ ಜನರ ಬಳಿಗೆ ಕೊಂಡೊಯ್ಯಲು ಸಿಎಂ ಈ ರೀತಿಯ ಯೋಜನೆ ಮಾಡಿದ್ದಾರೆ.
