ಇದು ರಾಜ್ಯವೇ ಬೆಚ್ಚಿ ಬೀಳಿಸುವ ಸುದ್ಧಿ; ಸಿಎಂ ಆಪ್ತನಿಂದಲೇ ಕೊಲೆ, ದರೋಡೆ, ರೇಪ್'ಗೆ ಕುಮ್ಮಕ್ಕು?

First Published 7, Feb 2018, 11:59 AM IST
Close Associate of CM Siddharamaiaho Minister Byrathi Basavaraju in Scam
Highlights

ಸಿಎಂ ಸಿದ್ದರಾಮಯ್ಯ  ಆಪ್ತ  ಭೈರತಿ ಬಸವರಾಜ್ ವಿರುದ್ಧ ಮಾಜಿ ಶಾಸಕ ನಂದೀಶ್ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಇದು ಇಡೀ ರಾಜ್ಯವೇ ಬೆಚ್ಚಿ ಬೀಳಿಸುವ ಸುದ್ಧಿ.

ಬೆಂಗಳೂರು (ಫೆ.07): ಸಿಎಂ ಸಿದ್ದರಾಮಯ್ಯ  ಆಪ್ತ  ಭೈರತಿ ಬಸವರಾಜ್ ವಿರುದ್ಧ ಮಾಜಿ ಶಾಸಕ ನಂದೀಶ್ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಇದು ಇಡೀ ರಾಜ್ಯವೇ ಬೆಚ್ಚಿ ಬೀಳಿಸುವ ಸುದ್ಧಿ.

ಶಾಸಕ ನಂದೀಶ್ ರೆಡ್ಡಿ,  ವಿಧಾನಸೌಧದಲ್ಲಿ ಸಿಎಂ ಬಲಗೈ ಬಂಟ ಶಾಸಕ ಭೈರತಿ ಬಸವರಾಜ್ ವಿರುದ್ಧ  ದಾಖಲೆ ಬಿಡುಗಡೆ ಮಾಡಿದ್ದಾರೆ.  ಕೆ ಆರ್ ಪುರಂ ಕ್ಷೇತ್ರದಲ್ಲಿ ಭೈರತಿ ಬಸವರಾಜ್ ಮತ್ತು ಬೆಂಬಲಿಗರು ನಾಲ್ಕೂವರೆ ವರ್ಷದಲ್ಲಿ 102 ಕೊಲೆಗಳನ್ನ ಮಾಡಿದ್ದಾರೆಂದು ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ.  ಕೊಲೆ ಪ್ರಕರಣದಲ್ಲಿ ಬೈರತಿ ಬಸವರಾಜ್ ಮತ್ತು ಬೆಂಬಲಿಗರ ಕೈವಾಡ ಇದೆ.  100ಕ್ಕೂ ಹೆಚ್ಚು ಅತ್ಯಾಚಾರಗಳಾಗಿವೆ.   200 ಕ್ಕೂ ಹೆಚ್ಚು ಸರಗಳ್ಳತನ ಆಗಿದೆ.  ಸಿಎಂ ಬಲಗೈ ಬಂಟ ಭೈರತಿ ಬಸವರಾಜ್ ಪ್ರತಿನಿಧಿಸುವ  ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ ಕ್ರೈಂ ಕ್ಷೇತ್ತವಾಯ್ತಾ ?   ಕೆ ಆರ್ ಪುರಂನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.  1 ಸಾವಿರ ಕೋಟಿಗೂ ಅಧಿಕ ಹಣ ಕೆಆರ್ ಪುರಂ ಕ್ಷೇತ್ರಕ್ಕೆ ಬಿಡುಗಡೆಯಾಗಿದೆ.  ಇದರಲ್ಲಿ 600 ಕೋಟಿಗೂ ಅಧಿಕ ಭ್ರಷ್ಟಾಚಾರವಾಗಿದೆ.  ನಾನು ಶಾಸಕನಾಗಿದ್ದ ಅವಧಿಯಲ್ಲಿ ಅನುದಾನ ಸದ್ಬಳಕೆ ಮಾಡಿಕೊಂಡಿದ್ದೆ.  ಈಗಿನ ಶಾಸಕ ರೌಡಿಯಂತೆ ವರ್ತಿಸುತ್ತಿದ್ದಾರೆ.  ನೂರಾರು ಕೋಟಿ ಗುಳುಂ ಮಾಡಿದ್ದಾರೆ ಎಂದು  ನಂದೀಶ್ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

 

loader