ವಿಶ್ವಸಂಸ್ಥೆಯ  ಹವಾಮಾನ ಶೃಂಗಸಭೆಯಲ್ಲಿಉ ಗ್ರೆಟಾ ಧನ್ಬರ್ಗ್ ಅಬ್ಬರ| ವಿಶ್ವ ವೇದಿಕೆಯಲ್ಲಿ ವಿಶ್ವ ನಾಯಕರನ್ನು ತರಾಟೆಗೆ ತೆಗೆದುಕೊಮಡ ಗ್ರೆಟಾ|  ಜಾಗತಿಕ ತಾಪಮಾನ ನಿಯಂತ್ರಣದಲ್ಲಿರುವ ಸೋತಿರುವ ವಿಶ್ವ ನಾಯಕರಿಗೆ ಬಿಸಿ ಮುಟ್ಟಿಸಿದ ಪರಿಸರ ಹೋರಾಟಗಾರ್ತಿ| ಮಾನವ ಜನಾಂಗ ಸಾಮೂಹಿಕ ವಿನಾಶದತ್ತ ಹೆಜ್ಜೆ ಹಾಕುತ್ತಿದೆ ಎಂದ ಗ್ರೆಟಾ| 

ವಿಶ್ವಸಂಸ್ಥೆ(ಸೆ.24): ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯ ವೇದಿಕೆಯಲ್ಲಿ, ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ವಿಶ್ವನಾಯಕರನ್ನೇ ತರಾಟೆಗೆ ತೆಗೆದುಕೊಂಡ ಅಚ್ಚರಿಯ ಘಟನೆ ನಡೆದಿದೆ. 

ಜಾಗತಿಕ ತಾಪಮಾನ ನಿಯಂತ್ರಣ, ಹಸಿರುಮನೆ ಅನಿಲ ಹೊರಸೂಸುವಿಕೆ ನಿಯಂತ್ರಣ ಮಾಡಲು ವಿಫಲರಾಗಿರುವ ವಿಶ್ವ ನಾಯಕರು ನನ್ನ ಪೀಳಿಗೆಗೆ ದ್ರೋಹ ಮಾಡಿದ್ದಾರೆ ಎಂದು ಗ್ರೆಟಾ ವಿಶ್ವದ ಘಟಾನುಘಟಿ ನಾಯಕರ ವಿರುದ್ಧ ಹರಿಹಾಯ್ದಿದ್ದಾಳೆ.

ಪರಿಸರ ನಾಶಕ್ಕೆ ಮುಂದಾಗಿರುವ ನಿಮ್ಮಂತ ನಾಯಕರಿಗೆ ಅದೆಷ್ಟು ಧೈರ್ಯ ಎಂದು ಗ್ರೆಟಾ ಜೋರು ಧ್ವನಿಯಲ್ಲಿ ಕೇಳಿದಾಗ ಸಭೆ ಒಂದು ಕ್ಷಣ ಮೌನಕ್ಕೆ ಶರಣಾಯ್ತು.

Scroll to load tweet…

ಕೇವಲ ಹಣ, ಬಾಹ್ಯ ಆರ್ಥಿಕ ಬೆಳವಣಿಗೆ ಎಂಬ ಕನಸಿನ ಬೆನ್ನೇರಿ ಹೊರಟಿರುವ ಮಾನವ ಜನಾಂಗ ಸಾಮೂಹಿಕ ವಿನಾಶದತ್ತ ಹೆಜ್ಜೆ ಹಾಕುತ್ತಿದೆ ಎಂದು ಗ್ರೆಟಾ ಇಡೀ ವಿಶ್ವ ಸಮುದಾಯಕ್ಕೆ ಎಚ್ಚರಿಕೆ ನೀಡಿದಳು.

ವಿಶ್ವಸಂಸ್ಥೆಯ ವೇದಿಕೆಯಲ್ಲೇ ವಿಶ್ವ ನಾಯಕರನ್ನು ತರಾಟೆಗೆ ತೆಗೆದುಕೊಂಡ ಸ್ವಿಡನ್ ಮೂಲದ ಗ್ರೆಟಾ ಥನ್ಬರ್ಗ್ , ಹವಾಮಾನ ಬದಲಾವಣೆಗೆ ಸಂಬಂಧಿ ಚಳುವಳಿ ಮೂಲಕ ಜಾಗತಿಕ ಮಟ್ಟದಲ್ಲಿ ಖ್ಯಾತಿಯಾಗಿದ್ದಾಳೆ.