ತಂದೆಯ ಮೃತದೇಹ ಮನೆಯಲ್ಲಿದ್ದಾಗಲೇ ಹೋಗಿ ಪರೀಕ್ಷೆ ಬರೆದು ಬಂದ ವಿದ್ಯಾರ್ಥಿ

First Published 15, Mar 2018, 3:29 PM IST
Class X student appears for Exam before Cremating father
Highlights

ಗುಜರಾತ್’ನಲ್ಲಿ 10ನೇ ತರಗತಿ ವಿದ್ಯಾರ್ಥಿಯೋರ್ವ  ತಂದೆಯ ಅಂತಿಮ ಸಂಸ್ಕಾರಕ್ಕೂ ಮುನ್ನಾ ಹೋಗಿ ಪರೀಕ್ಷೆ ಬರೆದು ಬಂದಿದ್ದಾನೆ.

ಸೂರತ್ : ಗುಜರಾತ್’ನಲ್ಲಿ 10ನೇ ತರಗತಿ ವಿದ್ಯಾರ್ಥಿಯೋರ್ವ  ತಂದೆಯ ಅಂತಿಮ ಸಂಸ್ಕಾರಕ್ಕೂ ಮುನ್ನಾ ಹೋಗಿ ಪರೀಕ್ಷೆ ಬರೆದು ಬಂದಿದ್ದಾನೆ.

ಬುಧವಾರ ನಡೆದ  ಬೋರ್ಡ್ ಎಕ್ಸಾಂ ಬರೆದು ಬಂದಿದ್ದಾನೆ.  ತಂದೆಯ ಮೃತದೇಹ ಮನೆಯಲ್ಲಿದ್ದ  ವೇಳೆ ದುಃಖದ ನಡುವೆಯೇ ಹೋಗಿ ತನ್ನ ಶಿಕ್ಷಣದ ಮೊದಲ ಘಟ್ಟವಾದ 10ನೇ ತರಗತಿ ಪರೀಕ್ಷೆಯನ್ನು ಬರೆದು ಬಂದಿದ್ದಾನೆ.

ಹೆಚ್ಚು ಕಾನ್ಫಿಡೆನ್ಸ್’ನಲ್ಲಿ ಪರೀಕ್ಷೆಗೆ ಹಾಜರಾಗಿದ್ದ  ವಿದ್ಯಾರ್ಥಿಗೆ  ತನ್ನ ದುಃಖವನ್ನು ಮಾತ್ರ ತಡೆಯಲಾಗಲಿಲ್ಲ. ಪರೀಕ್ಷಾ ಹಾಲ್’ನಲ್ಲಿಯೇ ಕೆಲ ಸಮಯ ಅತ್ತು ತನ್ನ ದುಃಖವನ್ನು ಹೊರಹಾಕಿದ್ದಾನೆ. ಹರ್ಷ ಮಹೊರ್ ಎನ್ನುವ 15 ವರ್ಷದ ವಿದ್ಯಾರ್ಥಿಯ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ದುಃಖದ ನಡುವೆಯೇ ಹೋಗಿ ಆತ ಪರೀಕ್ಷೆಯನ್ನು ಬರೆದು ಬಂದಿದ್ದಾನೆ.

loader