Asianet Suvarna News Asianet Suvarna News

ಪ್ರದ್ಯುಮ್ನ ಸಾವು ನೆನೆಪಿಸಿದ ವಡೋದರಾ ಶಾಲಾ ಬಾಲಕನ ಹತ್ಯೆ..!

ಪ್ರದ್ಯುಮ್ನ ಸಾವು ನೆನೆಪಿಸಿದ ವಡೋದರಾ ಶಾಲಾ ಬಾಲಕನ ಹತ್ಯೆ

ಚಾಕುವಿನಿಂದ ಇರಿದು ಶಾಲಾ ಬಾಲಕನ ಕೊಲೆ

ಹೊಟ್ಟೆಗೆ ಚಾಕುವಿನಿಂದ ಇರಿದು 9ನೇ ತರಗತಿ ವಿದ್ಯಾರ್ಥಿ ಕೊಲೆ

ಶಾಲಾ ಶೌಚಗೃಹದಲ್ಲಿ ಬಾಲಕನ ಮೃತದೇಹ ಪತ್ತೆ

 

Class 9 Student Stabbed To Death In School Washroom At Gujarat's Vadodara
  • Facebook
  • Twitter
  • Whatsapp

ವಡೋದರ(ಜೂ.22): ಕಳೆದ ವರ್ಷ ರಿಯಾನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ನಡೆದ ಪ್ರದ್ಯುಮ್ನನ ಕೊಲೆಯನ್ನು ನೆನಪಿಸುವಂತೆ ಗುಜರಾತ್‌ನ ವಡೋದರದ ಶಾಲೆಯೊಂದರಲ್ಲಿ ಅಂತದ್ದೇ ಘಟನೆ ಮರುಕಳಿಸಿದೆ.

ಗುಜರಾತ್ ನ ಶಾಲೆಯೊಂದರ ಶೌಚಗೃಹದಲ್ಲಿ 9ನೇ ತರಗತಿಯ ವಿದ್ಯಾರ್ಥಿಯ ಮೃತದೇಹ ಇಂದು ಮುಂಜಾನೆ ಪತ್ತೆಯಾಗಿದೆ. ೧೪ ವರ್ಷದ ಬಾಲಕನ ಹೊಟ್ಟೆಗೆ ಚಾಕುವಿನಿಂದ ಇರಿಯಲಾಗಿದ್ದು, ಮೃದೇಹವನ್ನು ಶಾಲೆಯ ಶೌಚಗೃಹದಲ್ಲೇ ಬಿಡಲಾಗಿದೆ.

ಸುದ್ದಿ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದು, ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ವರದಿ ಬಂದ ಬಳಿಕವಷ್ಟೇ ಈ ಕುರಿತು ಪ್ರತಿಕ್ರಿಯೆ ನೀಡುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ ನಲ್ಲಿ ಗುರ​ಗಾವ್​ ರಿಯಾನ್ ಅಂತಾರಾಷ್ಟ್ರೀಯ ಶಾಲೆಯ ಶೌಚಗೃಹದಲ್ಲಿ ಏಳು ವರ್ಷದ ಪ್ರದ್ಯುಮ್ನನ ಶವವು ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 2ನೇ ತರಗತಿ ಓದುತ್ತಿದ್ದ ಬಾಲಕನ ಸಾವು ಇಡೀ ದೇಶಾದ್ಯಂತ ಸುದ್ದಿಯಾಗಿತ್ತು.

Follow Us:
Download App:
  • android
  • ios