ಇಲ್ಲಿನ ಗುರ್ಗಾವ್ ‘ನಲ್ಲಿರುವ ರ್ಯಾನ್ ಅಂತರಾಷ್ಟ್ರೀಯ ಶಾಲೆಯಲ್ಲಿ 2 ನೇ ತರಗತಿ ಓದುತ್ತಿರುವ ಬಾಲಕನ ಮೃತದೇಹ ಶೌಚಾಲಯದಲ್ಲಿ ಪತ್ತೆಯಾಗಿದೆ.

ನವದೆಹಲಿ (ಸೆ.08): ಇಲ್ಲಿನ ಗುರ್ಗಾವ್ ‘ನಲ್ಲಿರುವ ರ್ಯಾನ್ ಅಂತರಾಷ್ಟ್ರೀಯ ಶಾಲೆಯಲ್ಲಿ 2 ನೇ ತರಗತಿ ಓದುತ್ತಿರುವ ಬಾಲಕನ ಮೃತದೇಹ ಶೌಚಾಲಯದಲ್ಲಿ ಪತ್ತೆಯಾಗಿದೆ.

ಪ್ರದುಮಾನ್ ಠಾಕೂರ್ ಎನ್ನುವ ಬಾಲಕನ ಮೃತದೇಹ ಬೆಳಿಗ್ಗೆ 8 ಗಂಟೆ ಸುಮಾರಿಗೆ ಶಾಲೆಯ ಶೌಚಾಲಯದಲ್ಲಿ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಇನ್ನೊಬ್ಬ ವಿದ್ಯಾರ್ಥಿ ಶೌಚಾಲಯವನ್ನು ಬಳಸಲು ಬಂದಾಗ ಇದು ಬೆಳಕಿಗೆ ಬಂದಿದೆ. ದೇಹದಿಂದ ಕತ್ತಿನ ಭಾಗ ಬೇರೆಯಾಗಿದ್ದು ಪಕ್ಕದಲ್ಲಿಯೇ ಚೂರಿ ಬಿದ್ದಿದೆ. ಕೂಡಲೇ ಶಾಲಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ರಕ್ತದ ಮಾದರಿ, ಫಿಂಗರ್ ಪ್ರಿಂಟ್’ನ್ನು ಸಂಗ್ರಹಿಸಿದೆ. ಸಿಸಿಟಿವಿ ಫೂಟೇಜನ್ನು ಪರಿಶೀಲಿಸಲಾಗುತ್ತಿದೆ.

ಶಾಲೆಯವರು ನನ್ನ ಮಗನ ಸಾವಿನ ವಿಚಾರವನ್ನು ಕೂಡಲೇ ನನಗೆ ತಿಳಿಸಲಿಲ್ಲ. ಅವರ ನಿರ್ಲಕ್ಷ್ಯದಿಂದಲೇ ಹೀಗಾಗಿದ್ದು ಎಂದು ಮೃತ ಬಾಲಕನ ತಂದೆ ಆರೋಪಿಸಿದ್ದಾರೆ.