ಪ್ರಾಂಶುಪಾಲರಿಗೆ ಗುಂಡಿಟ್ಟ ವಿದ್ಯಾರ್ಥಿ

First Published 20, Jan 2018, 6:01 PM IST
Class 12 Haryana student guns down principal in Yamunanagar school
Highlights

12 ನೇ ತರಗತಿ ವಿದ್ಯಾರ್ಥಿಯೊಬ್ಬ  ತಮ್ಮ ಕಾಲೇಜಿನ ಪ್ರಾಂಶುಪಾಲರನ್ನು ಶೂಟ್ ಮಾಡಿರುವ ವಿಚಿತ್ರ ಘಟನೆ ಹರ್ಯಾಣದಲ್ಲಿ ನಡೆದಿದೆ.

ನವದೆಹಲಿ (ಜ.20): 12 ನೇ ತರಗತಿ ವಿದ್ಯಾರ್ಥಿಯೊಬ್ಬ  ತಮ್ಮ ಕಾಲೇಜಿನ ಪ್ರಾಂಶುಪಾಲರನ್ನು ಶೂಟ್ ಮಾಡಿರುವ ವಿಚಿತ್ರ ಘಟನೆ ಹರ್ಯಾಣದಲ್ಲಿ ನಡೆದಿದೆ.

ಪ್ರಾಂಶುಪಾಲರು ಬೈದಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ತಂದೆಯ ಲೈಸೆನ್ಸ್ ಇರುವ ರಿವಾಲ್ವರ್ ತಂದು ಪ್ರಾಂಶುಪಾಲರನ್ನು ಶೂಟ್ ಮಾಡಿದ್ದಾನೆ. 3 ಬುಲೆಟ್'ಗಳು ದೇಹವನ್ನು ಹೊಕ್ಕಿದ್ದು ಪ್ರಾಂಶುಪಾಲರಾದ ರಿತು ಚಾಬ್ರಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ರಿವಾಲ್ವರ್ ಸಮೇತ  ಮಧ್ಯಾಹ್ನ ಕಾಲೇಜಿಗೆ ಬಂದ ವಿದ್ಯಾರ್ಥಿ ಪ್ರಾಂಶುಪಾಲರನ್ನು ನೋಡಬೇಕೆಂದು ಹೇಳಿದ. ಪ್ರಾಂಶುಪಾಲರ ರೂಮಿಗೆ ನುಗ್ಗಿದವನೇ ಅವರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಕಾಲೇಜಿನ ಸಿಬ್ಬಂದಿ ಹೇಳಿದ್ದಾರೆ.

loader