ಚೆನ್ನೈ (ಅ. 04): ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯದ ಕುರಿತ ಗೊಂದಲವನ್ನು ತಮಿಳುನಾಡು ಸರ್ಕಾರ ಬುಧವಾರದೊಳಗೆ ಸ್ಪಷ್ಟಪಡಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಮಂಗಳವಾರ ಸೂಚಿಸಿದೆ. 

ನಾಳೆಯೊಳಗೆ ಸಿಎಂ ಜಯಲಲಿತಾ ಅವರ ಆರೋಗ್ಯದ ಕುರಿತ ಮಾಹಿತಿಯನ್ನು ಸಲ್ಲಿಸುವುದಾಗಿ ಸರ್ಕಾರದ ಪರ ವಕೀಲರು ಮಾಹಿತಿ ನೀಡಿದ್ದಾರೆ ಎಂದು ಎಎನ್ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಜಯಲಲಿತಾ ಅವರು ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದು, ಆಕೆಯ ಪಕ್ಷ ಆರೋಗ್ಯದ ವಿಚಾರವನ್ನು ಮುಚ್ಚಿಡುತ್ತಿದ್ದು, ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಪೀಠ ಈ ಸೂಚನೆ ನೀಡಿದೆ.