ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಠಾಕೂರ್ ರವರ ಸೇವಾವಧಿ ನಾಳೆ ಮುಕ್ತಾಯಗೊಳ್ಳಲಿದ್ದು  ಇಂದು ನಡೆದ ಬೀಳ್ಕೋಡುಗೆ ಸಮಾರಂಭದಲ್ಲಿ ಸುಪ್ರೀಂಕೋರ್ಟ್ ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ವೀಕ್ಷಕನಾಗಿ, ಪ್ರೇಕ್ಷಕನಾಗಿ ನ್ಯಾಯಾಂಗಕ್ಕೆ ಕೊಡುಗೆ ನೀಡುತ್ತಾ ಮುಂದುವರೆಯುತ್ತೇನೆ ಎಂದು ವಾಗ್ದಾನ ಮಾಡಿದ್ದಾರೆ.

ಬೆಂಗಳೂರು (ಜ.03): ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಠಾಕೂರ್ ರವರ ಸೇವಾವಧಿ ನಾಳೆ ಮುಕ್ತಾಯಗೊಳ್ಳಲಿದ್ದು ಇಂದು ನಡೆದ ಬೀಳ್ಕೋಡುಗೆ ಸಮಾರಂಭದಲ್ಲಿ ಸುಪ್ರೀಂಕೋರ್ಟ್ ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ವೀಕ್ಷಕನಾಗಿ, ಪ್ರೇಕ್ಷಕನಾಗಿ ನ್ಯಾಯಾಂಗಕ್ಕೆ ಕೊಡುಗೆ ನೀಡುತ್ತಾ ಮುಂದುವರೆಯುತ್ತೇನೆ ಎಂದು ವಾಗ್ದಾನ ಮಾಡಿದ್ದಾರೆ.

ಅವಕಾಶಗಳು ನಿಮ್ಮ ಮನೆ ಬಾಗಿಲನ್ನು ತಟ್ಟಿದಾಗ ಕಳೆದುಕೊಳ್ಳಬಾರದು. ಒಮ್ಮೆ ಕಳೆದುಕೊಂಡರೆ ಮತ್ತೊಮ್ಮೆ ಸಿಗುವುದಿಲ್ಲವೆಂದು ಭಾವನಾತ್ಮಕವಾಗಿ ಧಾಟಿಯಲ್ಲಿ ಹೇಳಿದ್ದಾರೆ.

ಟಿ ಎಸ್ ಠಾಕೂರ್ ತಮ್ಮ ಸೇವಾವಧಿಯಲ್ಲಿ 28 ನ್ಯಾಯಾಧೀಶರ ವಿದಾಯ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಇಂದು ಸ್ವತಃ ಅವರ ವಿದಾಯ ಸಮಾರಂಭದಲ್ಲಿ ಗದ್ಗತಿತರಾದರು. ನೆರೆದಿದ್ದವರ ಕಣ್ಣಲ್ಲೂ ನೀರು ತುಂಬಿತ್ತು.

ಬೆಂಗಳೂರಿನಲ್ಲಿದ್ದಾಗಿನ ಸಂದರ್ಭವನ್ನು ನೆನೆಸಿಕೊಳ್ಳುತ್ತಾ, ಬೆಂಗಳೂರಿನಲ್ಲಿ 10 ವರ್ಷ ಸೇವೆ ಸಲ್ಲಿಸಿದ ಬಳಿಕ ಅಲ್ಲಿಂದ ಹೊರಟೆ. ಆಗ ಎಲ್ಲರ ಕಣ್ಣಲ್ಲೂ ನೀರು ತುಂಬಿತ್ತು. ಅದೇ ರೀತಿ ಇಂದು ನಿಮ್ಮೆಲ್ಲರ ಕಣ್ಣೀರು ತುಂಬಿದೆ ಎಂದು ಭಾವಾವೇಶಕ್ಕೆ ಒಳಗಾದರು.

ನ್ಯಾಯಾಂಗ ವ್ಯವಸ್ಥೆಯು ವೇಗವನ್ನು ಪಡೆದುಕೊಂಡು ತ್ವರಿತವಾಗಿ ನ್ಯಾಯ ತೀರ್ಮಾನವನ್ನು ಮುಂದಿನ ದಿನಗಳಲ್ಲಿ ನೀಡುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.