ಮಧ್ಯಂತರ ಆದೇಶ ಜಾರಿಗೊಳಿಸುವಂತೆ ಸೂಚನೆ ನೀಡಿರುವ ಕೋರ್ಟ್ ಪ್ರದರ್ಶನಕ್ಕೆ ತಡೆ ನೀಡಿದ್ದರೂ ಆದೇಶ ಜಾರಿಗೊಳಿಸದ ನಿರ್ಮಾಪಕರ ವಿರುದ್ಧ ಕೂಡ ಗರಂ ಆಗಿದೆ.

ಬೆಂಗಳೂರು(ಡಿ.28): ಪುನಿತ್ ರಾಜ್'ಕುಮಾರ್ ಅಭಿನಯದ ಅಂಜನಿಪುತ್ರ ಚಿತ್ರಕ್ಕೆ ಪುನಃ ದೊಡ್ಡ ಸಂಕಷ್ಟ ಎದುರಾಗಿದೆ. ಕೋರ್ಟ್ ಆದೇಶ ಜಾರಿಗೊಳಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸಿಟಿ ಸಿವಿಲ್ ಕೋರ್ಟ್ ಸೂಚನೆ ನೀಡಿದ್ದು, ಕೂಡಲೇ ರಾಜ್ಯದಾದ್ಯಂತ ಚಿತ್ರ ಸ್ಥಗಿತಕ್ಕೆ ಕ್ರಮಕೈಗೊಳ್ಳುವಂತೆ ಡಿಜಿ, ಐಜಿಗೆ ಆದೇಶಿಸಲಾಗಿದೆ.

ಮಧ್ಯಂತರ ಆದೇಶ ಜಾರಿಗೊಳಿಸುವಂತೆ ಸೂಚನೆ ನೀಡಿರುವ ಕೋರ್ಟ್ ಪ್ರದರ್ಶನಕ್ಕೆ ತಡೆ ನೀಡಿದ್ದರೂ ಆದೇಶ ಜಾರಿಗೊಳಿಸದ ನಿರ್ಮಾಪಕರ ವಿರುದ್ಧ ಕೂಡ ಗರಂ ಆಗಿದೆ. ವಕೀಲರ ಬಗ್ಗೆ ವಿವಾದಿತ ಸಂಭಾಷಣೆಯಿರುವ ಬಗ್ಗೆ ವಕೀಲ ನಾರಾಯಣಸ್ವಾಮಿ ಸೇರಿ 5 ಮಂದಿ ವಕೀಲರು ಅರ್ಜಿ ಸಲ್ಲಿಸಿದ್ದರು.