ಇದ್ದಕ್ಕಿದ್ದಂತೆ ಅಮಿತ್ ಶಾ ಶಾಕ್, ಬಿಜೆಪಿ ಸಂಸದರಿಗೆ  ವಿಪ್!

ತನ್ನೆಲ್ಲ ಸಂಸದರಿಗೆ ವಿಪ್ ಜಾರಿ ಮಾಡಿದ ಬಿಜೆಪಿ/ ಕಡ್ಡಾಯವಾಗಿ ಅಧಿವೇಶನ್ನೆ ಹಾಜರಿರಲು ಸೂಚನೆ/  ಪ್ರಮುಖ ಮಸೂದೆಗಳ ಮಂಡನೆ ಆಗಲಿರುವುದರಿಂದ ಸೂಚನೆ

citizenship Bill BJP Issues Whip to its Lok Sabha MPs

ನವದೆಹಲಿ(ಡಿ. 08):  ಪ್ರಮುಖ ಕೆಲ ಶಾಸನಗಳ ಮಂಡನೆ ಇರುವುದರಿಂದ ಡಿ. 9ರಿಂದ ಮೂರು ದಿನಗಳವರೆಗೆ ಪಕ್ಷದ ಎಲ್ಲಾ ಲೋಕಸಭಾ ಸದಸ್ಯರು ಉಪಸ್ಥಿತರಿರಬೇಕು ಎಂದು ಬಿಜೆಪಿ ವಿಪ್ ನೀಡಿದೆ.

ಡಿಸೆಂಬರ್ 9, ಸೋಮವಾರದಿಂದ ಡಿ. 11, ಮಂಗಳವಾರದವರೆಗೆ ಲೋಕಸಭೆಯಲ್ಲಿ ಬಹಳ ಮಹತ್ವದ ಕೆಲ ಶಾಸನಗಳ ಚರ್ಚೆಯಾಗಲಿದೆ. ಈ ವೇಳೆ ಹಾಜರಿದ್ದು ಸರ್ಕಾರದ ಜತೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು  ಥ್ರೀ ಲೈನ್ ವಿಪ್ ಹೊರಡಿಸಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಲಿದ್ಧಾರೆ. ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವ ಉದ್ದೇಶದಿಂದ ಪೌರತ್ವ ತಿದ್ದುಪಡಿ ಮಸೂದೆ ರೂಪಿಸಲಾಗಿದ್ದು ಪರ -ವಿರೋಧದ ಮಾತುಗಳು ಕೇಳಿ ಬಂದಿವೆ.

ವಿಪ್ ಗಳನ್ನು ಸಾಮಾನ್ಯವಾಗಿ ಮತದಾನದ ಸಮಯದಲ್ಲಿ ಮಾತ್ರ ಬಳಕೆಮಾಡಿಕೊಳ್ಳುತ್ತಾರೆ ಎಂಬ ಮಾತಿದೆ. ಆದರೆ ಸಭೆಗೆ   ಹಾಜರಾಗುವಂತೆ ಕಟ್ಟಪ್ಪಣೆ ನೀಡಲು ಇದನ್ನು ಬಳಕೆ ಮಾಡಿಕೊಳ್ಳಬಹುದು.

ಕರ್ನಾಟಕದಲ್ಲಿ ಉಪಚುನಾವಣೆ ಫಲಿತಾಂಶ ಬರಲಿದ್ದರೆ ಅತ್ತ ಕೇಂದ್ರದಲ್ಲಿ ಮಸೂದೆ ಮಂಡನೆ. ಸೋಮವಾರ ಸುದ್ದಿಗಳ ಮಹಾಪೂರ ಇರಲಿದೆ.

Latest Videos
Follow Us:
Download App:
  • android
  • ios