ಹಿರಿಯ ಪತ್ರಕರ್ತೆ, ಸಾಹಿತಿ, ಎಡಪಂಥೀಯ ಚಿಂತಕಿ ಗೌರಿ ಲಂಕೇಶ್ ಹತ್ಯೆಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಎಡಿಟರ್ಸ್ ಗೈಲ್ಡ್, ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಪ್ರೆಸ್ ಅಸೋಸಿಯೇಶನ್ ಸೇರಿದಂತೆ ಪತ್ರಕರ್ತರ ಸಂಘ ದೇಶಾದ್ಯಂತ ಪ್ರತಿಭಟನೆಗೆ ಮುಂದಾಗಿದೆ. ಗೌರಿ ಲಂಕೇಶ್ ಸಾವಿಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.

ಬೆಂಗಳೂರು (ಸೆ.06): ಹಿರಿಯ ಪತ್ರಕರ್ತೆ, ಸಾಹಿತಿ, ಎಡಪಂಥೀಯ ಚಿಂತಕಿ ಗೌರಿ ಲಂಕೇಶ್ ಹತ್ಯೆಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಎಡಿಟರ್ಸ್ ಗೈಲ್ಡ್, ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಪ್ರೆಸ್ ಅಸೋಸಿಯೇಶನ್ ಸೇರಿದಂತೆ ಪತ್ರಕರ್ತರ ಸಂಘ ದೇಶಾದ್ಯಂತ ಪ್ರತಿಭಟನೆಗೆ ಮುಂದಾಗಿದೆ. ಗೌರಿ ಲಂಕೇಶ್ ಸಾವಿಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಗೌರಿ ಸಾವಿಗೆ ಹಲವು ಖ್ಯಾತ ಪರ್ತಕರ್ತರು ಸಂತಾಪ ಸೂಚಿಸಿದ್ದಾರೆ. ಹಿರಿಯ ಪತ್ರಕರ್ತ ಶೇಖರ್ ಗುಪ್ತಾ; ಧೈರ್ಯವಿಲ್ಲದೇ ಪತ್ರಿಕೋದ್ಯಮವಿಲ್ಲ. ಭಿನ್ನಾಭಿಪ್ರಾಯವಿಲ್ಲದೇ ಪತ್ರಿಕೋದ್ಯಮವಿಲ್ಲ. ಇವರಿಗೆ ಧೈರ್ಯ ಮತ್ತು ಭಿನ್ನಾಭಿಪ್ರಾಯ ಎರಡೂ ಇತ್ತು ಎಂದು ಟ್ವೀಟಿಸಿದ್ದಾರೆ.

ಖ್ಯಾತ ಪತ್ರಕರ್ತ ರಾಜ್’ದೀಪ್ ಸರ್ದೇಸಾಯಿ, ಗೌರಿ ಲಂಕೇಶ್ ಮೇಲೆ ಗುಂಡಿನ ದಾಳಿ ನಡೆಸಿದವರು ಹೇಡಿಗಳು. ನಿಮ್ಮ ಗುಂಡು ಆಕೆಯನ್ನು ಕೊಂದಿರಬಹುದು ಆದರೆ ಅವರ ಕೆಚ್ಚೆದೆಯನ್ನು ಹತ್ತಿಕ್ಕಲಾಗುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ತಮ್ಮ ತತ್ವ-ಸಿದ್ದಾಂತಗಳನ್ನು ವಿರೋಧಿಸಿದವರನ್ನು ಬಿಜೆಪಿ-ಆರ್’ಎಸ್’ಎಸ್ ಹತ್ಯೆ ಮಾಡುತ್ತದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ, ಖ್ಯಾತ ಸಾಹಿತಿ ಜಾವೇದ್ ಅಖ್ತರ್, ನಟಿ ಸೋನಂ ಕಪೂರ್ ಸಂತಾಪ ವ್ಯಕ್ತಪಡಿಸಿದ್ದಾರೆ.