ಇತ್ತೀಚಿನ ದಿನಗಳಲ್ಲಿ ಯುವಕರು ಸಿಗರೇಟ್, ಗುಟ್ಕಾದಂತಹ ಚಟಗಳಿಗೆ ದಾಸರಾಗುತ್ತಿದ್ದಾರೆ. ಇದಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕೇಂದ್ರ ಕ್ರಮಕ್ಕೆ ಮುಂದಾಗಿದೆ.
ನವದೆಹಲಿ(ಸೆ.28): ಇತ್ತೀಚಿನ ದಿನಗಳಲ್ಲಿ ಯುವಕರು ಸಿಗರೇಟ್, ಗುಟ್ಕಾದಂತಹ ಚಟಗಳಿಗೆ ದಾಸರಾಗುತ್ತಿದ್ದಾರೆ. ಇದಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕೇಂದ್ರ ಕ್ರಮಕ್ಕೆ ಮುಂದಾಗಿದೆ.
ಚಾಕಲೇಟ್, ಬಿಸ್ಕಿತ್ ಮಾರಾಟದಂತಹ ಅಂಗಡಿಗಳಲ್ಲಿ ಸಿಗರೇಟ್, ಬೀಡಿ, ಗುಟ್ಕಾ ದಂತಹ ತಂಬಾಕು ಪದಾರ್ಥಗಳ ಮಾರಾಟಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಿದೆ. ಅಲ್ಲದೇ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳು ಸ್ಥಳೀಯ ಸಂಸ್ಥೆಗಳಲ್ಲಿ ನೋಂದಣಿ ಮಾಡಿಸಿಕೊಳ್ಳುವಂತೆ ಮಾಡಲು ಒಲವು ತೋರಿದೆ.
ಈ ಸಂಬಂಧ ರಾಜ್ಯ ಸರ್ಕಾರಗಳಿಗೆ ಸೆಪ್ಟೆಂಬರ್ 12ರಂದು ಪತ್ರ ಬರೆದಿರುವ ಕೇಂದ್ರ ಆರೋಗ್ಯ ಇಲಾಖೆ, ಈ ಕ್ರಮಗಳನ್ನು ಜಾರಿಗೆ ತರುವಂತೆ ಕೋರಿಕೆ ಇಟ್ಟಿದೆ. ಸ್ಥಳೀಯ ಪೌರ ಸಂಸ್ಥೆಗಳಿಂದ ಅನುಮತಿ ನೀಡುವ ವ್ಯವಸ್ಥೆ ರೂಪಿಸುವಂತೆ ಪತ್ರದಲ್ಲಿ ಕೇಂದ್ರ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದೆ. ಈ ಮೂಲಕ ಪ್ರತಿಯೊಂದು ಅಂಗಡಿಗಳ ಮೇಲೂ ನಿಗಾ ಇಡುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿದೆ ಎಂದು ಆರೋಗ್ಯ ಸಚಿವಾಲಯ ಆರ್ಥಿಕ ಸಲಹೆಗಾರ ಅರುಣ್ ಝಾ ತಿಳಿಸಿದ್ದಾರೆ.
ದೇಶದ 120 ಕೋಟಿ ಜನರಲ್ಲಿ ಪ್ರತಿ ಐವರಲ್ಲಿ ಒಬ್ಬರು ಗುಟ್ಕಾ ಹಾಗೂ ಖೈನಿ ಚಟ ಅಂಟಿಸಿಕೊಂಡಿದ್ದಾರೆ. 10 ಕೋಟಿ ಜನರು ಸಿಗರೇಟ್, ಬೀಡಿ ಸೇದುತ್ತಾರೆ ಎಂದು ಸರ್ಕಾರದಿಂದ ಮಾನ್ಯತೆ ಪಡೆದ ಸಮೀಕ್ಷೆಯೊಂದು ಈ ಹಿಂದೆಯೇ ತಿಳಿಸಿತ್ತು.
