ಉಡುಪಿ (ಸೆ.16): ಉಡುಪಿಯ ಉದ್ಯಮಿ ಭಾಸ್ಕರ ಶೆಟ್ಟಿ ಹೋಮಕುಂಡ ಹತ್ಯೆ ಪ್ರಕರಣದ ಸಿಐಡಿ ತನಿಖೆ ನಿರ್ಣಾಯಕ ಘಟ್ಟ ತಲುಪಿದೆ.
ಇದೇ ಮೊದಲಿಗೆ ಪ್ರಮುಖ ಆರೋಪಿ ನಿರಂಜನ ಭಟ್ಟನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಐಡಿ ತನಿಖೆಯಲ್ಲೂ ಮಹತ್ವದ ಅಂಶಗಳು ಹೊರಬಂದಿದೆ.
ಆದರೆ ಎಲ್ಲ ವಿವರಗಳನ್ನು ಸಿಐಡಿ ತಂಡ ರಹಸ್ಯವಾಗಿರಿಸಿದೆ. ಭಾಸ್ಕರ ಶೆಟ್ಟಿ ಕುಂಟುಂಬ ಅಥವಾ ಬಂಧುಗಳು ಮಾಧ್ಯಮಗಳಿಗೆ ಮಾತನಾಡದಂತೆ ತಾಕೀತು ಮಾಡಿದ್ದಾರೆ.
ಒಟ್ಟು 68 ಬಗೆಯ ಸ್ಯಾಂಪಲ್ ಗಳನ್ನು ಮಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಪೈಕಿ ನದಿಯಲ್ಲಿ ದೊರೆತಿರುವ ಮೂಳೆಗಳು ಮಾನವ ದೇಹದ್ದೇ ಎಂದು ಸಾಬೀತಾಗಿದೆ. ಅದು ಭಾಸ್ಕರ ಶೆಟ್ಟಿಯದ್ದೇ ಎಂಬುವುದು ಇನ್ನಷ್ಟೇ ತಿಳಿಯಬೇಕಾಗಿದೆ.
ಉಡುಪಿಯ ಖಾಸಗಿ ಬ್ಯಾಂಕ್ ನಲ್ಲಿ ಭಾಸ್ಕರ ಶೆಟ್ಟರಿಗೆ ಆರೂವರೆ ಕೋಟಿ ಸಾಲವಿದ್ದು, ಅದರ ವಸೂಲಾತಿಗೆ ಬ್ಯಾಂಕ್ ತಲೆಕೆಡಿಸಿಕೊಂಡಿದೆ.
