ಸಂತ್ರಸ್ತ ಮಹಿಳೆ ಡಿಸೆಂಬರ್ 17ರಂದು ನವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಪ್ರಕರಣದ ಪ್ರಮುಖ ರೂವಾರಿ ಡಿಎಆರ್ ಪೇದೆ ಸುಭಾಸ್ ಮುಗಳಖೋಡ, ಸಿದ್ದಲಿಂಗ ಅಬಲಕಟ್ಟಿ, ಮಾರುತಿ ಮಿರಜಕರ್, ಅಶೋಕ ಲಾಗಲೋಟಿ ವಿರುದ್ದ ದೂರು ನೀಡಿದ್ದಳು.

ಬಾಗಲಕೋಟೆ (ಡಿ.27): ಹೆಚ್.ವೈ.ಮೇಟಿ ರಾಸಲೀಲೆ ಪ್ರಕರಣದ ಸಿಐಡಿ ತನಿಖೆ ಇಂದು ಸಹ ಬಾಗಲಕೋಟೆಯಲ್ಲಿ ಮುಂದುವರೆದಿದೆ.

ಸಿಐಡಿ ಡಿವೈಎಸ್​’ಪಿ ರವಿಶಂಕರ್ ನೇತೃತ್ವದ ತಂಡ ನಿನ್ನೆಯಿಂದ ವಿಚಾರಣೆ ಶುರುಮಾಡಿದ್ದು, ಇಂದು ನವನಗರ ಪೊಲೀಸ್ ಠಾಣೆ ಮತ್ತು ಸರ್ಕಾರಿ ಜಿಲ್ಲಾಸ್ಪತ್ರೆಗೆ ಆಗಮಿಸಿ ಮಾಹಿತಿ ಕಲೆ ಹಾಕಿತ್ತು.

ಸಂತ್ರಸ್ತ ಮಹಿಳೆ ಡಿಸೆಂಬರ್ 17ರಂದು ನವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಪ್ರಕರಣದ ಪ್ರಮುಖ ರೂವಾರಿ ಡಿಎಆರ್ ಪೇದೆ ಸುಭಾಸ್ ಮುಗಳಖೋಡ, ಸಿದ್ದಲಿಂಗ ಅಬಲಕಟ್ಟಿ, ಮಾರುತಿ ಮಿರಜಕರ್, ಅಶೋಕ ಲಾಗಲೋಟಿ ವಿರುದ್ದ ದೂರು ನೀಡಿದ್ದಳು.

ಜೀವಬೆದರಿಕೆ ಹಾಕಿ ಹೆಚ್.ವೈ.ಮೇಟಿ ವಿರುದ್ಧ ಹೇಳಿಕೆ ಕೊಡಿಸಲಾಗಿರುವ ಪ್ರಕರಣದ ಸಂಬಂಧ ದೂರು ದಾಖಲಾಗಿತ್ತು. ಈ ಹಿನ್ನೆಲೆ ಸಿಐಡಿ ವಿಚಾರಣೆ ಶುರುವಾಗಿದೆ.