2013ರಿಂದ 2017ರವರೆಗೂ ಏರ್‌ ಇಂಡಿಯಾ ವಿಮಾನದ ಮೂಲಕ ಪ್ರಧಾನ ಮಂತ್ರಿ ಅವರು ನಡೆಸಿದ ವಿದೇಶ ಪ್ರಯಾಣಕ್ಕಾಗಿ ಎಷ್ಟುಹಣ ವ್ಯಯವಾಗಿದೆ ಎಂಬುದರ ಮಾಹಿತಿಯನ್ನು ಬಹಿರಂಗಪಡಿಸುವಂತೆ ವಿದೇಶಾಂಗ ಸಚಿವಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ನಿರ್ದೇಶನ ನೀಡಿದೆ.
ನವದೆಹಲಿ: 2013ರಿಂದ 2017ರವರೆಗೂ ಏರ್ ಇಂಡಿಯಾ ವಿಮಾನದ ಮೂಲಕ ಪ್ರಧಾನ ಮಂತ್ರಿ ಅವರು ನಡೆಸಿದ ವಿದೇಶ ಪ್ರಯಾಣಕ್ಕಾಗಿ ಎಷ್ಟುಹಣ ವ್ಯಯವಾಗಿದೆ ಎಂಬುದರ ಮಾಹಿತಿಯನ್ನು ಬಹಿರಂಗಪಡಿಸುವಂತೆ ವಿದೇಶಾಂಗ ಸಚಿವಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ನಿರ್ದೇಶನ ನೀಡಿದೆ.
ಈ ಸಂಬಂಧ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಸಂಪೂರ್ಣ ಮಾಹಿತಿ ಸಿಕ್ಕಿಲ್ಲ ಎಂಬುದಾಗಿ ನೌಕಾ ಪಡೆಯ ನಿವೃತ್ತ ಅಧಿಕಾರಿ ಲೋಕೇಶ್ ಬಾತ್ರಾ ಎಂಬುವರು ಮಂಗಳವಾರ ದೂರಿದ್ದರು.
ಈ ಹಿಂದೆ ಏರ್ ಇಂಡಿಯಾ ಮೂಲಕ ಪ್ರಧಾನಿಯವರು ಕೈಗೊಂಡ ವಿದೇಶ ಪ್ರಯಾಣದ ಮೇಲೆ ಖರ್ಚು ಮಾಡಲಾದ ಮೊತ್ತ, ವಿದೇಶ ಪ್ರಯಾಣದ ದಿನಾಂಕ ಮತ್ತು ಬಿಲ್ಗಳು ಹಲವು ಫೈಲ್ಗಳಲ್ಲಿ ಚದುರಿ ಹೋಗಿದ್ದು, ಅವುಗಳನ್ನು ಒಂದೆಡೆ ಜೋಡಿಸಿ ಆರ್ಟಿಐ ಅರ್ಜಿಗೆ ಉತ್ತರಿಸಲು ಹೆಚ್ಚು ಮಾನವ ಸಂಪನ್ಮೂಲದ ಅಗತ್ಯವಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ಹಕ್ಕು ಆಯೋಗಕ್ಕೆ ಉತ್ತರಿಸಿತ್ತು.
