ಮೆರಿಕದ ಗುಪ್ತಚರ ಸಂಸ್ಥೆಯಾದ ಸಿಐಎ ಹೊಸದಾಗಿ ಮುದ್ರಿಸಿರುವ ವಲ್ಡ್‌ರ್‍ ಫ್ಯಾಕ್ಟ್ಬುಕ್‌ ಎಂಬ ದಾಖಲೆಯಲ್ಲಿ ಭಾರತದ ಸಂಘ ಪರಿವಾರದ ಸಂಸ್ಥೆಗಳಾದ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಹಾಗೂ ಬಜರಂಗ ದಳಗಳನ್ನು ಧಾರ್ಮಿಕ ಭಯೋತ್ಪಾದಕ ಗುಂಪುಗಳು ಎಂದು ಹೆಸರಿಸಲಾಗಿದೆ.

ನವದೆಹಲಿ : ಅಮೆರಿಕದ ಗುಪ್ತಚರ ಸಂಸ್ಥೆಯಾದ ಸಿಐಎ ಹೊಸದಾಗಿ ಮುದ್ರಿಸಿರುವ ವಲ್ಡ್‌ರ್‍ ಫ್ಯಾಕ್ಟ್ಬುಕ್‌ ಎಂಬ ದಾಖಲೆಯಲ್ಲಿ ಭಾರತದ ಸಂಘ ಪರಿವಾರದ ಸಂಸ್ಥೆಗಳಾದ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಹಾಗೂ ಬಜರಂಗ ದಳಗಳನ್ನು ಧಾರ್ಮಿಕ ಭಯೋತ್ಪಾದಕ ಗುಂಪುಗಳು ಎಂದು ಹೆಸರಿಸಲಾಗಿದೆ.

ಇತ್ತೀಚೆಗೆ ಈ ಪುಸ್ತಕವನ್ನು ಮುದ್ರಿಸಲಾಗಿದೆ. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ಈ ಎರಡೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಸಿವೆ. ಇನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಅನ್ನು ಬಿಜೆಪಿಯ ಸೈದ್ಧಾಂತಿಕ ಮಾತೃ ಸಂಸ್ಥೆ ಹಾಗೂ ರಾಷ್ಟ್ರೀಯವಾದಿ ಸಂಘಟನೆ ಎಂದು ವಿಶ್ಲೇಷಿಸಲಾಗಿದೆ.

ಬಜರಂಗದಳದ ರಾಷ್ಟ್ರೀಯ ವಕ್ತಾರ ಮನೋಜ್‌ ವರ್ಮಾ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾನೂನು ತಜ್ಞರ ಜತೆ ಈ ಕುರಿತಂತೆ ಸಮಾಲೋಚಿಸುತ್ತಿದ್ದೇವೆ. ನಮ್ಮ ಸಂಘಟನೆಯನ್ನು ಧಾರ್ಮಿಕ ಭಯೋತ್ಪಾದಕ ಗುಂಪು ಎಂದು ಹೆಸರಿಸಿದ್ದು ಇತ್ತೀಚೆಗೆ ತಿಳಿಸಿದೆ ಎಂದರು.

ಇದೇ ಪಟ್ಟಿಯಲ್ಲಿ ಕಾಶ್ಮೀರದ ಹುರಿಯತ್‌ ಕಾನ್ಫರೆನ್ಸ್‌ ಅನ್ನು ಪ್ರತ್ಯೇಕತಾವಾದಿ ಗುಂಪು ಎಂದು ಹೆಸರಿಸಲಾಗಿದೆ. ಇನ್ನೊಂದೆಡೆ ಮೆಹಮೂದ್‌ ಮದನಿಯ ಜಮೀಯತ್‌ ಉಲೇಮಾ ಎ ಹಿಂದ್‌ ಸಂಘಟನೆಯನ್ನು ಧಾರ್ಮಿಕ ಸಂಘಟನೆ ಎಂದು ಕರೆಯಲಾಗಿದೆ.