ನೆನಪಿರಲಿ ಪ್ರೇಮ್, ವಿಜಯ ರಾಘವೇಂದ್ರ, ದಿಗಂತ್ ಹಾಗು ಪ್ರಜ್ವಲ್ ದೇವರಾಜ್ ಅಭಿನಯದ ಮಲ್ಟಿ ಸ್ಟಾರ್ ಚಿತ್ರ ಚೌಕ. ಈ ಚಿತ್ರಕ್ಕಾಗಿ ನಿರ್ದೇಶಕ ಯೋಗರಾಜ್ ಭಟ್ ಬರೆದಿರುವ ಅಲ್ಲಾಡಿಸು ಹಾಡು ಸಮಾಜಿಕ ತಾಣದಲ್ಲಿ ಬಾರಿ ವೈರಲ್ ಆಗಿದೆ.

ಬೆಂಗಳೂರು (ಜ.18): ನೆನಪಿರಲಿ ಪ್ರೇಮ್, ವಿಜಯ ರಾಘವೇಂದ್ರ, ದಿಗಂತ್ ಹಾಗು ಪ್ರಜ್ವಲ್ ದೇವರಾಜ್ ಅಭಿನಯದ ಮಲ್ಟಿ ಸ್ಟಾರ್ ಚಿತ್ರ ಚೌಕ. ಈ ಚಿತ್ರಕ್ಕಾಗಿ ನಿರ್ದೇಶಕ ಯೋಗರಾಜ್ ಭಟ್ ಬರೆದಿರುವ ಅಲ್ಲಾಡಿಸು ಹಾಡು ಸಮಾಜಿಕ ತಾಣದಲ್ಲಿ ಬಾರಿ ವೈರಲ್ ಆಗಿದೆ.

ಬರೋಬ್ಬರಿ 8 ಲಕ್ಷ ಜನ ಅಲ್ಲಾಡಿಸು ಹಾಡನ್ನ ನೋಡಿ ಖುಷಿ ಪಟ್ಟಿದ್ದಾರೆ. ಭಟ್ರು ಬರೆದಿರುವ ಗೀತ ರಚನೆಗೆ ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ. ಈ ಕ್ಯಾಚೀ ಪದಗಳಿಗೆ ವಿ ಹರಿ ಕೃಷ್ಣ ಟ್ಯೂನ್ಸ್ ಹಾಕಿದ್ದಾರೆ.ಸದ್ಯಕ್ಕೆ ಯೂ ಟ್ಯೂಬ್ ನಲ್ಲಿ ಅಲ್ಲಾಡಿಸು ಹಾಡು ಲಕ್ಷಾಂತರ ಅಭಿಮಾನಿಗಳ ಫೇವರೆಟ್ ಹಾಡು ಆಗಿದೆ. ದ್ವಾರಕೀಶ್ ನಿರ್ಮಾಣದ 50ನೇ ಸಿನಿಮಾವಾಗಿರೋ ಚೌಕ ಸಿನಿಮಾಕ್ಕೆ ನಿರ್ದೇಶಕ ತರುಣ್ ಸುಧೀರ್ ನಿರ್ದೇಶನವಿದೆ.. ಮುಂದಿನ ತಿಂಗಳು ಚೌಕ ಚಿತ್ರ ತೆರಗೆ ಬರಲಿದೆ.