ಮಂಗಳೂರು[ಜ.23] ಚಿತ್ರಾಪುರ ಮಠದ ಸ್ವಾಮೀಜಿ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಬುಧವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.

ಇಹಲೋಕದ ಯಾತ್ರೆ ಮುಗಿಸಿದ ಶತಮಾನದ ಸಂತ

ಚಿತ್ರಾಪುರ ಮಠದ ಆವರಣದಲ್ಲಿರುವ ಬೃಂದಾವನದಲ್ಲಿ ಸ್ವಾಮೀಜಿಯವರನ್ನು ಬೃಂದಾವನಸ್ಥರನ್ನಾಗಿ ಮಾಡಲಾಯಿತು. ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಮಠದ ಕಿರಿಯ ಸ್ವಾಮೀಜಿ ವಿದ್ಯೇಂದ್ರ ತೀರ್ಥರು ಸ್ವಾಮೀಜಿಗೆ ನಮನ ಸಲ್ಲಿಸಿದರು.