* ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ* ಚಿಂತಾಮಣಿ ನಗರಸಭೆ ಆಯುಕ್ತರ ಅಮಾನತು* ಡಿಸಿ ದೀಪ್ತಿ ಆದಿತ್ಯಾ ಕಾನಡೆಯಿಂದ ಅಮಾನತು ಆದೇಶ* ಚಿಂತಾಮಣಿ ನಗರಸಭೆ ಆಯುಕ್ತ ಮುನಿಶಾಮಿ* ಪ್ರಭಾರ ಆಯುಕ್ತರಾಗಿ ಎನ್.ಭಾಸ್ಕರ್ ನೇಮಕ
ಚಿಕ್ಕಬಳ್ಳಾಪುರ(ಆ. 30): ಲೈಂಗಿಕ ಕಿರುಕುಳ ಆರೋಪದಡಿ ಚಿಂತಾಮಣಿ ನಗರಸಭೆ ಆಯುಕ್ತರನ್ನು ಅಮಾನತುಗೊಳಿಸಲಾಗಿದೆ. ಜಿಲ್ಲಾಧಿಕಾರಿ ದೀಪ್ತಿ ಆದಿತ್ಯಾ ಕಾನಡೆ ಅವರು ನಗರಸಭೆ ಆಯುಕ್ತರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಚಿಂತಾಮಣಿ ನಗರಸಭೆ ಆಯುಕ್ತ ಮುನಿಶಾಮಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂದು ಮಹಿಳಾ ಸಿಬ್ಬಂದಿಯೊಬ್ಬರು ದೂರು ನೀಡಿದ್ದರು. ಈ ದೂರಿನ ಅನ್ವಯ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ, ಆಯುಕ್ತ ಮುನಿಶಾಮಿ ಅವರನ್ನು ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.
ಈ ವೇಳೆ, ಜಿಲ್ಲಾ ಯೋಜನಾ ನಿರ್ದೇಶಕರಾದ ಎನ್. ಭಾಸ್ಕರ್ ಅವರನ್ನು ಚಿಂತಾಮಣಿಯ ಪ್ರಭಾರ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
