ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರಾಗುವ ಮುನ್ನ ಕೊನೆಯ ತಂತ್ರ ಇದಾಗಿದೆ ಎನ್ನಲಾಗಿದೆ.
ಚೆನ್ನೈ(ಫೆ.15): ಕೋರ್ಟ್'ಗೆ ಶರಣಾಗುವ ಮುನ್ನ ಕೊನೆಯ ಅಸ್ತ್ರ ಉಪಯೋಗಿಸಲು ಚಿನ್ನಮ್ಮ ಸಿದ್ದರಾಗುತ್ತಿದ್ದಾರೆ.ರಾಜ್ಯಪಾಲರ ತೀರ್ಮಾನಕ್ಕಾಗಿ ಕಾದು ಕುಳಿತಿರುವ ಶಶಿಕಲಾ ನಟರಾಜನ್ ರಾಜ್ಯಪಾಲರ ತೀರ್ಮಾನ ಹೊರ ಬಿದ್ದ ನಂತರ ಕೋರ್ಟ್ಗೆ ಶರಣಾಗಲು ತೀರ್ಮಾನಿಸಿದ್ದಾರೆ. ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರಾಗುವ ಮುನ್ನ ಕೊನೆಯ ತಂತ್ರ ಇದಾಗಿದೆ ಎನ್ನಲಾಗಿದೆ. ಸದ್ಯ ಚೆನೈನ ಪೊಯಿಸ್ ಗಾರ್ಡನ್ ಮನೆಯಲ್ಲಿರುವ ಮೂವರು ಆರೋಪಿಗಳು ಕಡೆ ಗಳಿಗೆಯ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಬೆಳಗ್ಗೆ 10.30ರ ಸುಮಾರಿಗೆ ರಾಜ್ಯಪಾಲರು ತಮ್ಮ ಅಭಿಪ್ರಾಯ ಹೇಳಲಿದ್ದಾರೆ ಎನ್ನಲಾಗಿದೆ.
