ಬೀಜಿಂಗ್[ಸೆ.27]: ಬಸ್ಸು, ರೈಲು ಅಥವಾ ವಿಮಾನ ಪ್ರಯಾಣದ ವೇಳೆ ಕೆಲ ಪ್ರಯಾಣಿಕರು ತಮ್ಮ ಸಹ ಪ್ರಯಾಣಿಕರಿಗೆ ಕಿರಿಕಿರಿ ಮಾಡಿರುವುದು ಹೊಸ ವಿಚಾರವೇನಲ್ಲ ಬಿಡಿ. ಆದರೆ, ಚೀನಾದ ಪ್ರಯಾಣಕಿಯೊಬ್ಬರು ತನಗೆ ಗಾಳಿ ಬರುತ್ತಿಲ್ಲವೆಂದು ವಿಮಾನದ ತುರ್ತು ನಿರ್ಗಮನದ ಬಾಗಿಲನ್ನೇ ತೆರೆದಿದ್ದಾರಂತೆ.

ಮಹಿಳಾ ಪ್ರಯಾಣಕಿ ಮಾಡಿದ ಕಿತಾಪತಿಯಿಂದಾಗಿ ಚೀನಾದ ವುಹಾನ್‌ನಿಂದ ಲಾನ್ಜುವಾಗೆ ತೆರಳುತ್ತಿದ್ದ ವಿಮಾನವು ಒಂದು ಗಂಟೆಗಳ ಕಾಲ ವಿಳಂಬವಾಗಿದೆಯಂತೆ.

ಈ ಬಗ್ಗೆ ವಿಮಾನದ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ತುರ್ತು ನಿರ್ಗಮನದ ಬಾಗಿಲು ತೆರೆದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.