ಭಿನ್ನ ರೀತಿಯ ಕಟ್ಟಡಗಳನ್ನು ನಿರ್ಮಿಸುವುದು ಇತ್ತೀಚಿನ ಫ್ಯಾಷನ್. ಆದರೆ, ಚೀನಾದಲ್ಲಿ ನಿರ್ಮಿಸಿದ ಕಟ್ಟಡವೊಂದು ಬೃಹತ್ ಟಾಯ್ಲೆಟ್‌ನಂತೆ ಕಾಣುತ್ತಿದೆ.
ಬೀಜಿಂಗ್(ಸೆ.29): ಭಿನ್ನ ರೀತಿಯ ಕಟ್ಟಡಗಳನ್ನು ನಿರ್ಮಿಸುವುದು ಇತ್ತೀಚಿನ ಫ್ಯಾಷನ್. ಆದರೆ, ಚೀನಾದಲ್ಲಿ ನಿರ್ಮಿಸಿದ ಕಟ್ಟಡವೊಂದು ಬೃಹತ್ ಟಾಯ್ಲೆಟ್ನಂತೆ ಕಾಣುತ್ತಿದೆ.
ಚೀನಾದ ಹೆನಾನ್ ಪ್ರಾಂತ್ಯದಲ್ಲಿ ಉತ್ತರ ಚೀನಾ ವಿಶ್ವವಿದ್ಯಾಲಯವನ್ನು ೮೪ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ, ಅದು ವಿಶ್ವವಿದ್ಯಾಲಯ ಕಟ್ಟಡದಂತೆ ಕಾಣದೇ, ಬೃಹತ್ ಟಾಯ್ಲೆಟ್ನಂತೆ ಗೋಚರಿಸುತ್ತಿದೆ. ಈ ಕಟ್ಟಡ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಕ್ಕೆ ಗುರಿಯಾಗಿದ್ದು, ‘ಟಾಯ್ಲೆಟ್ ಬಿಲ್ಡಿಂಗ್’ ಎಂದು ಪ್ರಸಿದ್ಧಿಗಳಿಸಿದೆ.
