ಕೆಲ ಕಾಲ ಎರಡೂ ಸೇನೆಗಳ ನಡುವೆ ಕಲ್ಲು ತೂರಾಟ ನಡೆದಿದೆ. ಭಾರತದ ಸ್ವಾತಂತ್ರ ದಿನಾಚರಣೆಯೆಂದೇ ಚೀನಾ ಉದ್ದಟತನ ತೋರಿದೆ.
ಚೀನಾ ಸೈನಿಕರು ಭಾರತೀಯ ಸೈನಿಕರೊಂದಿಗೆ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದಾರೆ. ಇತ್ತೀಚಿಗೆ ಡೋಕ್ಲಾಮ್ ನಲ್ಲಿ ಗಡಿಯೊಳಗೆ ನುಗ್ಗಲು ಯತ್ನಿಸಿದ್ರು. ಈ ವೇಳೆ ಭಾರತೀಯ ಸೈನಿಕರು ಅವರನ್ನ ತಡೆದು ನಿಲ್ಲಿಸಿದ್ರು. ಇದೀಗ ಅಂತದ್ದೇ ಘಟನೆ ಆಗಸ್ಟ್ 15 ರಂದು ನಡೆದಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಚೀನಾ ಸೈನಿಕರು ಲಡಾಕ್ ನಲ್ಲಿ ಕಲ್ಲು ತೂರಾಟ ನಡೆಸಿದ್ದು ಪ್ರತಿಯಾಗಿ ಭಾರತೀಯ ಸೈನಿಕರೂ ಕಲ್ಲು ತೂರಾಟ ನಡೆಸಿದ್ದಾರೆ.ಕೆಲ ಕಾಲ ಎರಡೂ ಸೇನೆಗಳ ನಡುವೆ ಕಲ್ಲು ತೂರಾಟ ನಡೆದಿದೆ. ಭಾರತದ ಸ್ವಾತಂತ್ರ ದಿನಾಚರಣೆಯೆಂದೇ ಚೀನಾ ಉದ್ದಟತನ ತೋರಿದೆ. ಆದಾಗ್ಯೂ ಭಾರತೀಯ ಸೇನೆ ಚೀನಾ ಸೈನಿಕರನ್ನ ಹಿಮ್ಮೆಟ್ಟಿಸಿದ್ದಾರೆ. ಭಾರತೀಯ ಸೈನಿಕರು ಹೆಚ್ಚಾಗಿ ಜಮಾವಣೆಯಾದ ಹಿನ್ನೆಲೆಯಲ್ಲಿ ಚೀನಾ ಸೈನಿಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
