Asianet Suvarna News Asianet Suvarna News

ಆರೋಗ್ಯವಾಗಿವೆ ಚೀನಾ ಸೃಷ್ಟಿಸಿದ ಮಂಗಗಳು..!

ತದ್ರೂಪಿ ಮಂಗಗಳನ್ನು ಸೃಷ್ಟಿಸುವಲ್ಲಿ ಚೀನಾ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. 20 ವರ್ಷಗಳ ಹಿಂದೆ ತದ್ರೂಪಿ ಕುರಿಯೊಂದನ್ನು ಸೃಷ್ಟಿಸಲಾಗಿತ್ತು. ಈಗ ಅದೇ ಮಾದರಿಯನ್ನು ಸುಧಾರಿತ ವಿಧಾನದೊಂದಿಗೆ ಬಳಸಿ ಎರಡು ವಾನರಗಳನ್ನು ಚೀನೀ ವಿಜ್ಞಾನಿಗಳು ಸೃಷ್ಟಿ ಮಾಡಿದ್ದಾರೆ. ವಿಜ್ಞಾನಿಗಳು ಸೃಷ್ಟಿ ಮಾಡಿದ ಮಂಗಗಳು ಆರೋಗ್ಯವಾಗಿವೆ ಎಂದು ಹೇಳಿದ್ದಾರೆ.

Chinese scientists clone monkeys potentially opening door to humans

ಬೀಜಿಂಗ್: ತದ್ರೂಪಿ ಮಂಗಗಳನ್ನು ಸೃಷ್ಟಿಸುವಲ್ಲಿ ಚೀನಾ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. 20 ವರ್ಷಗಳ ಹಿಂದೆ ತದ್ರೂಪಿ ಕುರಿಯೊಂದನ್ನು ಸೃಷ್ಟಿಸಲಾಗಿತ್ತು. ಈಗ ಅದೇ ಮಾದರಿಯನ್ನು ಸುಧಾರಿತ ವಿಧಾನದೊಂದಿಗೆ ಬಳಸಿ ಎರಡು ವಾನರಗಳನ್ನು ಚೀನೀ ವಿಜ್ಞಾನಿಗಳು ಸೃಷ್ಟಿ ಮಾಡಿದ್ದಾರೆ. ವಿಜ್ಞಾನಿಗಳು ಸೃಷ್ಟಿ ಮಾಡಿದ ಮಂಗಗಳು ಆರೋಗ್ಯವಾಗಿವೆ ಎಂದು ಹೇಳಿದ್ದಾರೆ.

ಶಾಂಘೈನ ಚೀನಾ ಅಕಾಡೆಮಿಯಲ್ಲಿನ ಹುವಾ ಹುವಾ ಹಾಗೂ ಝಾಂಗ್ ಝಾಂಗ್ ಎಂಬ ಹೆಸರನ್ನು ಮಂಗಗಳಿಗೆ ಇಡಲಾಗಿದೆ. ಈ ತಂತ್ರಜ್ಞಾನ ಬಳಸಿ ನಾಯಿ, ಹಂದಿ, ಬೆಕ್ಕು ಮುಂತಾದವನ್ನು ಸೃಷ್ಟಿಸಲಾಗಿತ್ತು. ಆದರೆ ಮಂಗಗಳ ಸೃಷ್ಟಿ ಸವಾಲಾಗಿತ್ತು.

ಆದರೆ, ಇದೀಗ ಯಶಸ್ವಿಯಾಗಿದೆ. ಮಾನವನಿಗೆ ತಗಲುವ ರೋಗಗಳಿಗೆ ಔಷಧ ಕಂಡು ಹಿಡಿಯಲು ಔಷಧ ಕಂಪನಿಗಳು ಪ್ರತಿ ವರ್ಷ 30 ಸಾವಿರದಿಂದ 40 ಮಂಗಗಳನ್ನು ಬಳಸುತ್ತವೆ. ಕೋತಿಗಳನ್ನು ಈವರೆಗೆ ಕಾಡಿನಿಂದ ಹಿಡಿದು ತಂದು ಸಂಶೋಧನೆಗೆ ಬಳಸಲಾಗುತ್ತಿತ್ತು. ಆದರೆ ಈಗ ತದ್ರೂಪಿ ಮಂಗಗಳನ್ನು ಸೃಷ್ಟಿಸುವಲ್ಲಿ ಸಿಕ್ಕಿರುವ ಯಶಸ್ಸಿನಿಂದ, ಸಂಶೋಧನೆಗೆ ನೈಜ ಮಂಗಗಳ ಬದಲು ತದ್ರೂಪಿ ವಾನರಗಳನ್ನೇ ಬಳಸಲು ಅನುವಾಗಲಿದೆ.

Follow Us:
Download App:
  • android
  • ios