ಭಾರತದ ಇಂತಹ ನಡವಳಿಕೆಗಳು ಅತ್ಯಂತ ಬೇಜವಾಬ್ದಾರಿಯಿಂದ ಕೂಡಿದೆ. ಭಾರತೀಯ ಸೇನೆಯ ಮುಖ್ಯಸ್ಥರು  ಇತಿಹಾಸದಿಂದ ಪಾಠ ಕಲಿತಿರುವ ಬಗ್ಗೆ ಅರಿತುಕೊಂಡು ಈ ರೀತಿ ಅರಚುವುದನ್ನು ನಿಲ್ಲಿಸಬೇಕು'

ಬೀಜಿಂಗ್(ಜೂ.29): ನೀವು ಇತಿಹಾಸದಿಂದ ಪಾಠ ಕಲಿತಂತಿಲ್ಲ,1962ರಲ್ಲಿ ಸೋತದ್ದನ್ನು ನೆನಪು ಮಾಡಿಕೊಂಡು ಯುದ್ಧದ ಬಗ್ಗೆ ಕೂಗಾಡುವುದನ್ನು ಬಿಡಬೇಕು ಎಂದು ಚೀನಾ ಬಾರತಕ್ಕೆ ಎಚ್ಚರಿಕೆ ನೀಡಿದೆ.

ಚೀನಾ ಹಾಗೂ ಪಾಕಿಸ್ತಾನದ ಆಂತರಿಕ ಭದ್ರತಾ ವಿಷಯಗಳಿಗೆ ಸಂಬಂಧಪಟ್ಟಂತೆ ಭಾರತದ ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ನೀಡಿರುವ ಹೇಳಿಕೆಯ ಬಗ್ಗೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ವಕ್ತಾರ ವೂ ಕಿಯಾನ್ ಪ್ರತಿಕ್ರಿಯೆ ನೀಡಿದ್ದು, ಭಾರತದ ಇಂತಹ ನಡವಳಿಕೆಗಳು ಅತ್ಯಂತ ಬೇಜವಾಬ್ದಾರಿಯಿಂದ ಕೂಡಿದೆ. ಭಾರತೀಯ ಸೇನೆಯ ಮುಖ್ಯಸ್ಥರು ಇತಿಹಾಸದಿಂದ ಪಾಠ ಕಲಿತಿರುವ ಬಗ್ಗೆ ಅರಿತುಕೊಂಡು ಈ ರೀತಿ ಅರಚುವುದನ್ನು ನಿಲ್ಲಿಸಬೇಕು' ಎಂದು ಮಾಸಿಕ ರಕ್ಷಣಾ ಮಂತ್ರಾಲಯದ ಸಭೆಯಲ್ಲಿ ತಿಳಿಸಿದ್ದಾರೆ.

ನಮ್ಮ ಸೇನೆ ನಮ್ಮ ಸ್ವಂತ ನೆಲದಲ್ಲಿ ರಸ್ತೆ ನಿರ್ಮಿಸುತ್ತಿದೆ ವಿನಃ ಭೂತಾನ್'ಗೆ ಸೇರಿದ ಪ್ರದೇಶದಲ್ಲಿ ಕೆಲಸಮಾಡುತ್ತಿಲ್ಲ.ನಮ್ಮ ಗಡಿ ಪ್ರದೇಶದಲ್ಲಿ ಅಕ್ರಮವಾಗಿ ಕಾಲಿರಿಸಿದ್ದಕ್ಕೆ ತಕ್ಕ ಪ್ರತ್ಯತ್ತರ ನೀಡಿದ್ದೇವೆ. ಅಲ್ಲದೆ ನಾವು ಯಾವುದೇ ದೇಶದ ವಿರುದ್ಧ ಅನ್ಯತಾ ದಾಳಿ ಮಾಡುವುದಿಲ್ಲ'. ಭೂತಾನ್ ಪ್ರದೇಶದಲ್ಲಿ ಅಕ್ರಮವಾಗಿ ಕಾರ್ಯಾಚರಣೆ ನಡೆಸುತ್ತಿರುವು ಬಗ್ಗೆ ವೂ ಕಿಯಾನ್ ಅಲ್ಲಗಳೆದಿದ್ದಾರೆ. ಅಲ್ಲದೆ ನಮಗೆ ಸೇರಿದ ಪ್ರದೇಶದಿಂದ ಭಾರತದ ಪಡೆಗಳು ವಾಪಸಾಗಬೇಕು. ಇಲ್ಲದಿದ್ದರೆ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ' ಭಾರತೀಯ ಸೇನೆಗೆ ಆಗ್ರಹಿಸಿದ್ದಾರೆ.

ದೋಂಗ್'ಲಾಮ್ ಪ್ರದೇಶ ಅತ್ಯಂತ ಕಿರಿದಾದ ಸ್ಥಳದಲ್ಲಿದ್ದು, ಭಾರತ,ಚೀನಾ ಹಾಗೂ ಭೂತಾನ್'ನ ಮೂರು ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ.ಇದು ಭೂತಾನ್ ದೇಶಕ್ಕೆ ಸೇರಿದರಾದರೂ ಚೀನಾದ ನಿಯಂತ್ರಣದಲ್ಲಿದೆ.ಎರಡೂ ದೇಶಗಳ ನಡುವೆ ಇಲ್ಲಿಯವೆರೆಗೂ 24 ಸುತ್ತಿನ ಮಾತುಕತೆಗಳು ನಡೆದರೂ ಗಡಿ ವಿಚಾರ ತಹಬದಿಗೆ ಬಂದಿಲ್ಲ.