ಚೀನಾ ಪ್ರದೇಶದಲ್ಲಿ ಡ್ರೋನ್ ಪತನವಾಗಿದ್ದಕ್ಕೆ ತಾಂತ್ರಿಕ ದೋಷ ಕಾರಣ ಎಂದು ಭಾರತ ಸ್ಪಷ್ಟನೆ ನೀಡಿದ್ದ ಹೊರತಾಗಿಯೂ ಚೀನಾ ಕ್ಯಾತೆ ತೆಗೆದಿದ್ದು, ಇದೊಂದು ಅನಗತ್ಯ ಪ್ರಚೋದನೆ. ಕ್ಷಮೆ ಕೇಳದಿದ್ದರೆ ತಕ್ಕ ಪರಿಣಾಮ ಎದುರಿಸಬೇಕಾದೀತು ಎಂದು ಹೇಳಿದೆ.
ಬೀಜಿಂಗ್: ಚೀನಾ ಪ್ರದೇಶದಲ್ಲಿ ಡ್ರೋನ್ ಪತನವಾಗಿದ್ದಕ್ಕೆ ತಾಂತ್ರಿಕ ದೋಷ ಕಾರಣ ಎಂದು ಭಾರತ ಸ್ಪಷ್ಟನೆ ನೀಡಿದ್ದ ಹೊರತಾಗಿಯೂ ಚೀನಾ ಕ್ಯಾತೆ ತೆಗೆದಿದ್ದು, ಇದೊಂದು ಅನಗತ್ಯ ಪ್ರಚೋದನೆ. ಕ್ಷಮೆ ಕೇಳದಿದ್ದರೆ ತಕ್ಕ ಪರಿಣಾಮ ಎದುರಿಸಬೇಕಾದೀತು ಎಂದು ಹೇಳಿದೆ.
ಭಾರತ ಮತ್ತು ಚೀನಾ ನಡುವೆ ಡೋಕ್ಲಾಮ್ ಬಿಕ್ಕಟ್ಟು ನಡೆದ ಸ್ಪಲ್ಪದೂರದಲ್ಲೇ ಭಾರತದ ಡ್ರೋನ್ ಗಡಿಯ ಒಳಗೆ ಪ್ರವೇಶಿಸಿದೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಉಭಯ ದೇಶಗಳು ಪ್ರಚೋದನಕಾರಿ ವರ್ತಿಸಬಾರದು. ಆದರೆ, ಭಾರತ ಪ್ರಚೋದನಕಾರಿಯಾಗಿ ನಡೆದುಕೊಂಡಿದೆ ಎಂದು ಚೀನಾ ಮಾಧ್ಯಮವೊಂದು ಹೇಳಿದೆ.
