ಚೀನಾದ ಹಾಂಗ್ಟೌನ್'ನಲ್ಲಿ ನಡೆಯುತ್ತಿದ್ದ ಸರ್ಕಸ್'ನಲ್ಲಿ ಏಕಾಏಕಿ ಬೋನ್'ನಿಂದ ಹುಲಿ ಹೊರ ಬಂದಿದೆ. ಹುಲಿ ದಾಳಿಯಿಂದ ಬೆದರಿದ ಜನರು ದಿಕ್ಕಾಪಾಲಾಗಿ ಸ್ಥಳದಿಂದ ಪ್ರಾಣಭಯದಿಂದ ಓಡಿದ್ದಾರೆ.
ಬೀಜಿಂಗ್ (ನ.28): ಸರ್ಕಸ್ ಬೋನ್'ನಿಂದ ಹಿಲಿಯೊಂದು ತಪ್ಪಿಸಿಕೊಂಡು ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರ ಮೇಲೆ ದಾಳಿ ಮಾಡಿದ ಘಟನೆ ಚೀನಾದಲ್ಲಿ ನಡೆದಿದೆ. ಚೀನಾದ ಹಾಂಗ್ಟೌನ್'ನಲ್ಲಿ ನಡೆಯುತ್ತಿದ್ದ ಸರ್ಕಸ್'ನಲ್ಲಿ ಏಕಾಏಕಿ ಬೋನ್'ನಿಂದ ಹುಲಿ ಹೊರ ಬಂದಿದೆ. ಹುಲಿ ದಾಳಿಯಿಂದ ಬೆದರಿದ ಜನರು ದಿಕ್ಕಾಪಾಲಾಗಿ ಸ್ಥಳದಿಂದ ಪ್ರಾಣಭಯದಿಂದ ಓಡಿದ್ದಾರೆ.
ಅಲ್ಲದೇ ಮಕ್ಕಳ ಮೇಲೆಯೂ ಕೂಡ ಹುಲಿರಾಯ ದಾಳಿ ಮಾಡಿದ್ದು, ಕೆಲ ಮಕ್ಕಳು ಗಾಯಗೊಂಡಿದ್ದಾರೆ. ಹುಲಿ ದಾಳಿಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
