ಪಾಕಿಸ್ತಾನ ಭಯೋತ್ಪಾದಕರ ಸ್ವರ್ಗ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಬೆನ್ನಲ್ಲೇ ಪಾಕಿಸ್ತಾನವನ್ನು ಸಮರ್ಥಿಸಿಕೊಳ್ಳಲು ಚೀನಾ ಮುಂದೆ ಬಂದಿದೆ.

ನವದೆಹಲಿ (ಜ.02): ಪಾಕಿಸ್ತಾನ ಭಯೋತ್ಪಾದಕರ ಸ್ವರ್ಗ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಬೆನ್ನಲ್ಲೇ ಪಾಕಿಸ್ತಾನವನ್ನು ಸಮರ್ಥಿಸಿಕೊಳ್ಳಲು ಚೀನಾ ಮುಂದೆ ಬಂದಿದೆ.

ಪಾಕಿಸ್ತಾನ ಭಯೋತ್ಪಾದಕರಿಗೆ ಸ್ವರ್ಗವನ್ನೇ ಕಲ್ಪಿಸಿತ್ತು. ಕಳೆದ 15 ವರ್ಷಗಳಿಂದ ಅಮೇರಿಕಾ ಪಾಕಿಸ್ತಾನಕ್ಕೆ 33 ಬಿಲಿಯನ್ ಡಾಲರ್'ಗಿಂತ ಹೆಚ್ಚು ಹಣ ಸಹಾಯ ಮಾಡಿದೆ. ಆದರೆ ಅವರು ನಮಗೆ ಸುಳ್ಳು ಮತ್ತು ಮೋಸವನ್ನು ಹೊರತುಪಡಿಸಿ ಬೇರೆನನ್ನು ನೀಡಿಲ್ಲ. ನಮ್ಮನ್ನು ಮೂರ್ಖರು ಎಂದು ಭಾವಿಸಿದ್ದರು ಎಂದು ಟ್ರಂಪ್ ನಿನ್ನೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಟ್ರಂಪ್ ಹೇಳಿಕೆ ಬೆನ್ನಲ್ಲೇ ಪಾಕ್ ಸಮರ್ಥನೆಗೆ ಚೀನಾ ಧಾವಿಸಿದೆ. ಭಯೋತ್ಪಾದನೆ ವಿರುದ್ಧ ಹೋರಾಡಲು ಪಾಕ್ ಸಾಕಷ್ಟು ಪರಿಶ್ರಮಿಸುತ್ತಿದೆ. ಭಯೋತ್ಪಾದನೆಯನ್ನು ಜಾಗತಿಕ ಮಟ್ಟದಲ್ಲಿ ತೊಡೆದು ಹಾಕಲು ಅಭೂತಪೂರ್ವ ಕೊಡುಗೆ ನೀಡಿದೆ. ಜಾಗತಿಕ ಸಮುದಾಯಗಳು ಇದನ್ನು ತಿಳಿದುಕೊಳ್ಳಬೇಕು ಎಂದು ಚೀನಾ ಹೇಳಿದೆ.