Asianet Suvarna News Asianet Suvarna News

ಗಿಲ್ಗಿಟ್-ಬಾಲ್ಟಿಸ್ತಾನ್ ನುಂಗುವ ಪಾಕ್ ಹುನ್ನಾರಕ್ಕೆ ಚೀನಾ ವಿರೋಧ

ಚೀನಾದ ಸಿಪಿಇಸಿ ಯೋಜನೆ ಹಾದುಹೋಗುವ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರದೇಶವನ್ನು ನಿಯಂತ್ರಿಸುವ ಪಾಕಿಸ್ತಾನದ ಪ್ರಯತ್ನವನ್ನು ಚೀನಾ ವಿರೋಧಿಸಿದೆ. ಉಭಯ ದೇಶಗಳ ನಡುವೆ ಕೇವಲ ಸಿಪಿಇಸಿ ಯೋಜನೆ ಕುರಿತು ಒಪ್ಪಂದವಾಗಿದೆಯೇ ಹೊರತು ಯಾವುದೇ ಪ್ರದೇಶದ ಮೇಲೆ ಏಕಸ್ವಾಮ್ಯತೆ ಸ್ಥಾಪಿಸಲು ಅಲ್ಲ ಎಂದು ಚೀನಾ ಖಡಕ್ ಸಂದೇಶ ಕಳುಹಿಸಿದೆ.

China oppose Pak's order on Gilgit-Baltistan

ಬಿಜಿಂಗ್(ಮೇ 29): ಚೀನಾದ ಸಿಪಿಇಸಿ ಯೋಜನೆ ಹಾದುಹೋಗುವ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರದೇಶವನ್ನು ನಿಯಂತ್ರಿಸುವ ಪಾಕಿಸ್ತಾನದ ಪ್ರಯತ್ನವನ್ನು ಚೀನಾ ವಿರೋಧಿಸಿದೆ. ಉಭಯ ದೇಶಗಳ ನಡುವೆ ಕೇವಲ ಸಿಪಿಇಸಿ ಯೋಜನೆ ಕುರಿತು ಒಪ್ಪಂದವಾಗಿದೆಯೇ ಹೊರತು ಯಾವುದೇ ಪ್ರದೇಶದ ಮೇಲೆ ಏಕಸ್ವಾಮ್ಯತೆ ಸ್ಥಾಪಿಸಲು ಅಲ್ಲ ಎಂದು ಚೀನಾ ಖಡಕ್ ಸಂದೇಶ ಕಳುಹಿಸಿದೆ.

ಕಳೆದ ಮೇ 21 ರಂದು ಪಾಕಿಸ್ತಾನ ಸಂಸತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದ ವ್ಯವಹಾರಗಳನ್ನು ನೋಡಿಕೊಳ್ಳಲು ಪ್ರಧಾನಿ ಶಾಹೀದ್ ಅಬ್ಬಾಸಿ ಅವಾರಿಗೆ ಸಂಪೂರ್ಣ ಅಧಿಕಾರ ನೀಡುವ ಮಸೂದೆ ಪಾಸು ಮಾಡಿತ್ತು. ಈ ಮೂಲಕ ಈ ಪ್ರದೇಶದ ಮೇಲೆ ಸ್ಥಳೀಯ ಆಡಳಿತದ ನಿಯಂತ್ರಣವನ್ನು ಕಸಿದುಕೊಳ್ಳಲು ಪಾಕಿಸ್ತಾನ ಮುಂದಾಗಿತ್ತು.

ಆದರೆ ಪಾಕಿಸ್ತಾನದ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ಚೀನಾ, ಜಮ್ಮು-ಕಾಶ್ಮೀರ ವಿವಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಮಸ್ಯೆಯಾಗಿದ್ದು, ಉಭಯ ದೇಶಗಳೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂಧು ಹೇಳಿದೆ. ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿ ತನ್ನ ಆರ್ಥಿಕ ಕಾರಿಡಾರ್ ಹಾದು ಹೋಗುವುದು ನಿಜವಾದರೂ, ಉಭಯ ರಾಷ್ಟ್ರಗಳ ನಡುವಿನ ವಿವಾದದಲ್ಲಿ ಮೂಗು ತೂರಿಸುವುದಿಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ.

ಸಿಪಿಇಸಿ ಕಾರಿಡಾರ್ ಪಶ್ಚಿಮ ಚೀನಾದ ಕಾಶ್ಗರ್ ಪ್ರದೇಶವನ್ನು ಪಾಕಿಸ್ತಾನದ ಗ್ವಾದರ್ ಬಂದರಿನೊಂದಿಗೆ ಸಂಪರ್ಕಿಸುತ್ತದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಪಾಕಿಸ್ತಾನ, ಈ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಿ ಭಾರತದ ಪ್ರಭಾವ ಕುಗ್ಗುವಂತೆ ಮಾಡುವ ಯೋಜನೆ ಹಾಕಿಕೊಂಡಿತ್ತು.

 

Follow Us:
Download App:
  • android
  • ios